ಋಗ್ವೇದಸಂಹಿತಾ ಭಾಗ – ೩೨ – ಐತರೇಯಬ್ರಾಹ್ಮಣ – ಎರಡನೆಯ ಭಾಗ
ವಿಷಯಾನುಕ್ರಮಣಿಕೆ
ಹದಿನಾಲ್ಕನೇ ಅಧ್ಯಾಯ
ಮೊದಲನೆಯ ಖಂಡವು — ಇತರ ಯಜ್ಞಗಳ ವಿಷಯದಲ್ಲಿ ಅಗ್ನಿಷ್ತೋಮಯಾಗವು ಎಲ್ಲಾ ಯಜ್ಞಗಳಿಗೂ ಮಾದರಿಯಾಗಿರುವೆದೆಂಬ ವಿಚಾರವು ಮತ್ತು ಅಗ್ನಿಷ್ಟೋಮದ ಮೂಲಸ್ವರೂಪ, ಅರ್ಥ ವಿವರಣೆ ಮತ್ತು ಎಲ್ಲಾ ಯಜ್ಞಗಳಿಗೂ ಇದಕ್ಕೂ ಇರುವ ಸಾಧಾರಣ ಸ್ವರೂಪವು ಮತ್ತು ಚತುಷ್ಟೋಮ ಮತ್ತು ಜ್ಯೋತಿಷ್ಟೋಮಯಾಗಗಳ ಸ್ವರೂಪವು
ಎರಡನೆಯ ಖಂಡವು — ಎಲ್ಲಾ ಅಗ್ನಿಗಳ ಸ್ವರೂಪವೂ ಅಗ್ನಿಷ್ಟೋಮಯಾಗದಲ್ಲಿ ಅಅಂತರ್ಗತವಾಗಿ ವ್ಯಾಪಿಸಿರುವವು
ಮೂರನೆಯ ಖಂಡವು — ಜ್ಯೋತಿಷ್ಟೋಮದಲ್ಲಿ ಕೆಲವು ಭಾಗಗಳೂ ಉಕ್ಥ್ಯ, ಅತಿರಾತ್ರ ಎಂಬ ವಿಕೃತಿಯಾಗಗಳೂ ಅಗ್ನಿಷ್ಟೋಮದಲ್ಲಿ ಸೇರಿರುವವು
ನಲ್ಕನೆಯ ಖಂಡವು — ಅಗ್ನಿಷ್ಟೋಮದಲ್ಲಿ ಏತಕ್ಕಾಗಿ ನಾಲ್ಕು ಸ್ತೋಮಗಳನ್ನು ಪಠಿಸುವರು ಇತ್ಯಾದಿ
ಐದನೆಯ ಖಂಡವು — ಅಗ್ನಿಷ್ಟೋಮಕ್ಕೆ ಅಗ್ನಿಷ್ಟೋಮ, ಚತುಷ್ಟೋಮ, ಜ್ಯೋತಿಷ್ಟೋಮ ಮುಂತಾದ ಅನೇಕ ಹೆಸರುಗಳಿವೆ. ಜ್ಯೋತಿಷ್ಟೊಮಕ್ಕೆ ಕೊನೆಮೊದಲಿಲ್ಲ.
ಆರನೆಯ ಖಂಡವು — ಪ್ರಾತಸ್ಸವನ, ಮಾಧ್ಯಂದಿನಸವನ, ತೃತೀಯಸವನಗಳಲ್ಲಿ ಶಸ್ತ್ರಮಂತ್ರಗಳನ್ನು ಹೇಗೆ ಪಠಿಸಬೇಕು? ಸೂರ್ಯನು ಹುಟ್ಟುಉದೂ ಇಲ್ಲ. ಮುಳುಗುವುದೂ ಇಲ್ಲ. ಆದ್ದರಿಂದ ಸೂರ್ಯೋದಯ, ಸೂರ್ಯಾಸ್ತಮಯಗಳಿಗೆ ಅರ್ಥವೇನು?
ಹದಿನೈದನೆಯ ಅಧ್ಯಾಯ
ದೇವತೆಗಳು ತಮ್ಮಿಂದ ಓಡಿಹೋದ ಯಜ್ಞವನ್ನು ಕ್ರಮಕ್ರಮವಾಗಿ ಹಿಂದಎ ಪಡೆದುದು. ಯಾವ ಪುರುಷರು ಯಜ್ಞದಲ್ಲಿ ಋತ್ವಿಕ್ಕುಗಳಾಗಿ ಭಗವಹಿಸಲು ಅರ್ಹರು? ದೇವಿ ಮತ್ತು ದೇವಿಕಾ ಎಂಬುವರಿಗೆ ಅರ್ಪಿಸಬೇಕಾದ ಆಹುತಿಗಳು. ಉಕ್ಥ್ಯ ಎಂಬ ಯಾಗವಿಧಾನವು
ಮೊದಲನೆಯ ಖಂಡವು — ದೇವತೆಗಳು ತಮ್ಮಿಂದ ಓಡಿಹೋಗಿದ್ದ ಯಜ್ಞವನ್ನು (ಯಜ್ಞಾಭಿಮಾನಿ ಪುರುಷನನ್ನು) ಹೇಗೆ ಹಿಂದಕ್ಕೆ ಪಡೆದರು? ನಾನಾವಿಧ ಕಾರ್ಯಕಲಾಪಗಳನ್ನು ಹೇಗೆ ಅನುಸರಿಸಿದರು? ಯಾವ ವಿಧವಾಗಿ ಆಚರಿಸಿದ ಯಜ್ಞವು ಪರಿಣಾಮರ್ಕಾಇಯಾಯಿತು?
ಎರಡನೆಯ ಖಂಡವು — ಯಜ್ಞದಲ್ಲಿ ಪಾತ್ರವಹಿಸಿ ಯಜ್ಞವನ್ನು ನಿರ್ವಹಿಸಬೇಕಾದ ಋತ್ವಿಗಾದಿಗಳನ್ನು ಆರಿಸುವುದರಲ್ಲಿ ಉಂಟಾಗಬಹುದಾದ ತೊಂದರೆಗಳು ಮತ್ತು ಅವುಗಳನ್ನು ಹೇಗೆ ನಿರ್ವಾಇಸಬಹುದೆಂಬ ವಿಷಯ ಇತ್ಯಾದಿ.
ಮೂರನೆಯ ಖಂಡವು — ಧಾತೃದೇವತೆ ಅರ್ಪಿಸುವ ಆಹುತಿಗಳು ಮತ್ತು ದೇವಿಕಾ ಎಂಬ ಆಹುತಿಗಳು ಅನುಮತಿ, ರಾಕಾ, ಸಿನಿವಾಲಿ ಮತ್ತು ಕುಹೂ ಎಂಬ ದೇವತಾವಿಶೇಷಗಳು
ನಲ್ಕನೆಯ ಖಂಡವು — ಸೂರ್ಯನಿಗೂ ದೇವಿಯರು, ದ್ಯೌಃ, ಉಷಸ್ಸು, ಗೌಃ, ಪ್ರಥಿವೀ ಎಂಬ ಛಂದಸ್ಸುಗಳಿಂದ ಉಕ್ತರಾದ ಸ್ತ್ರೀದೇವತೆಗಳಿಗೆ ಅರ್ಪಿಸುವ ಆಹುತಿಗಳು, ದೇವಿಕಾ ಮತ್ತು ದೇವಿಯರಿಗೆ ಯಾವಾಗ ಆಹುತಿಗಳನ್ನರ್ಪಿಸಬೇಕು? ವೃದ್ಧದ್ಯುಮ್ನ ಎಂಬುವನ ವೃತ್ತಾಂತವು
ಐದನೆಯ ಖಂಡವು — ಉಕ್ಥ್ಯವೆಂಬ ಯಾಗ ವಿಶೇಷವು ಸಾಕಮಶ್ಚಿ ಮತ್ತು ಪ್ರಮಂಹಿಷ್ಠೀಯ ಎಂಬ ಉಪಮಂತ್ರಗಳ ವಿವರಣೆ ಇತ್ಯಾದಿ
ಆರನೆಯ ಖಂಡವು — ಹೋತೃವಿನ ಸಹಾಯಕರಾದ ಮೈತ್ರಾವರುಣ, ಬ್ರಾಹ್ಮಣಾಚ್ಛಂಸಿ, ಅಚ್ಛಾವಾಕಾ ಎಂಬ ಹೋತೃವರ್ಗದವರು ಉಕ್ಥ್ಯಯಾಗದ ತೃತೀಯಸವನದಲ್ಲಿ ಪಠಿಸಬೇಕಾದ ಶಸ್ತ್ರ ಮಂತ್ರಗಳು ಇತ್ಯಾದಿ
ಹದಿನಾರನೆಯ ಅಧ್ಯಾಯ
ಷೋಳಶಿ ಮತ್ತು ಅತಿರಾತ್ರ ಎಂಬ ಯಜ್ಞಗಳು
ಮೊದಲನೆಯ ಖಂಡಾವು — ಷೋಷಶೀ ಎಂಬ ಯಜ್ಞದ ಮೂಲರೂಪವು ಷೋಳಶೀ ಎಂಬ ಯಜ್ಞದಲ್ಲಿ ಪಠಿಸುವ ಶಸ್ತ್ರಮಂತ್ರಗಳು ಅನುಷ್ಟುಪ್ಛಂದಸ್ಸಿನವು ಎಂಬ ವಿಚಾರ
ಎರಡನೆಯ ಖಂಡವು — ಷೋಳಶೀ ಎಂಬ ಶಸ್ತ್ರಮಂತ್ರವನ್ನು ಪಠಿಸುವ ವಿಧಾನವು. ಗೌರಿವೀತಿ ಅಥವಾ ನಾನದ ಎಂಬ ಸಾಮಮಂತ್ರವನ್ನು ಉಪಯೋಗಿಸುವ ವಿಧಾನ
ಮೂರನೆಯ ಖಂಡವು — ಷೋಳಶಿ ಶಸ್ತ್ರದಲ್ಲಿ ಬೇರೆ ಬೇರೆ ಎರಡುಛಂದಸ್ಸುಗಳ ಪದಗಳನ್ನು ಹೇಗೆ ಸೇರಿಸಿ ಪಠಿಸಬೇಕೆಂಬ ಕ್ರಮದ ವಿವರಣೆಯು
ನಾಲ್ಕನೆಯ ಖಂಡವು — ಮಹಾನಾಮ್ನೀ ಎಂಬ ವ್ರತದಿಂದ ತೆಗೆದುಕೊಂಡ ಉಪಸರ್ಗಗಳು. ಸರಿಯಾದ ಅನುಷ್ಟುಪ್ ಮಂತ್ರಗಳನ್ನು ವಿಹೃತ ಮತ್ತು ಅವಿಹೃತ ಎಂಬ ಕ್ರಮಗಳಲ್ಲಿ ಪಠಿಸುವುದರ ಪರಿಣಾಮವು. ಷೋಳಶೀ ಎಂಬ ಶಸ್ತ್ರಮಂತ್ರಗಳ ಯಾಜ್ಯಾಮಂತ್ರವು
ಐದನೆಯ ಖಂಡವು — ಅತಿರಾತ್ರವೆಂಬ ಯಜ್ಞದ ವಿಶೇಷವು. ಇದರ ಉತ್ಪತ್ತಿಯು ಇದರ ಮೂರು ಪರ್ಯಾಯಗಳು
ಆರನೆಯ ಖಂಡವು — ಅತಿರಾತ್ರಯಾಗದ ಮೂರು ಪರ್ಯಾಯಗಳಲ್ಲಿ ಪಠಿಸಲ್ಪಡುವ ಶಸ್ತ್ರಮಂತ್ರಗಳು, ಸಂಧಿಸ್ತೋತ್ರ
ಹದಿನೇಳನೇ ಅಧ್ಯಾಯವು
ಮೊದಲನೇ ಖಂಡವು — ಆಶ್ವಿನಶಸ್ತ್ರವು; ಗವಾಮಯನದ ಮೊದಲನೇ ದಿನವು ರಥಂತರ ಮತ್ತು ಬೃಹತ್ಸಾಮಗಳು ಮತ್ತು ಅವಕ್ಕೆ ಸಂಬಂಧಪಟ್ಟ ಇತರ ಮಂತ್ರಗಳು. ಸತ್ರಯಾಗದಲ್ಲಿ ಮಹಾ ವ್ರತವೆಂಬ ಹೆಸರಿನ ದಿನದ ಕಾರ್ಯಕಲಾಪಗಳು
ಎರಡನೇ ಖಂಡವು — ಆಶ್ವಿನಶಸ್ತ್ರವನ್ನು ಪಡೆಯುವುದಕ್ಕಾಗಿ ದೇವತೆಗಳು ಓಡುವ ಸ್ಪರ್ಧೆಯನ್ನು ನಡೆಸುವುದು.
ಮೂರನೇ ಖಂಡವು — ಆಶ್ವಿನ ಶಸ್ತ್ರಮಂತ್ರಗಳಿಗಾಗಿ ದೇವತೆಗಳಿಗೂ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಯಾವ ಯಾವ ದೇವತೆಗಳ ರಥಗಳಿಗೆ ಯಾವ ಯಾವ ವಾಹನಗಳನ್ನು ಹೂಡಿದ್ದರು ಎಂಬ ವಿಚಾರ. ಈ ಆಶ್ವಿನ ಶಸ್ತ್ರದಲ್ಲಿರುವ ಸೂರ್ಯದೇವತಾಕವಾದ ಮಂತ್ರಗಳು.
ನಾಲ್ಕನೆಯ ಖಂಡವು — ಆಶ್ವಿನ ಶಸ್ತ್ರಮಂತ್ರದಲ್ಲಿ ಸೂರ್ಯದೇವತಾಕವಾದ ಮಂತ್ರಗಳನ್ನು ಪಠಿಸಿದ ಮೇಲೆ ಮುಂದಿನ ಮಂತ್ರಗಳು ಸೂರ್ಯನಿಗೂ ಬೃಹತೀಛಂದಸ್ಸುಗಳಿಗೂ ಸಂಬಂಧವನ್ನು ಕಲ್ಪಿಸಿರಬೇಕು. ಇಂದ್ರನ ಪರವಾದ ಪ್ರಗಾಥಮಂತ್ರಗಳು. ರಥಂತರವೆಂಬ ಸಾಮಮಂತ್ರವು ಮಿತ್ರಾವರುಣರ ಪರವಾದ ಗ್ರಗಾಥಮಂತ್ರಗಳು. ದ್ಯಾವಾಪೃಥಿವೀ ಎಂಬ ದೇವತೆಗಳನ್ನು ಪ್ರತಿಪಾದಿಸುವ ಎರಡು ಮಂತ್ರಗಳು. ನಿರ್ಯತಿದೇವತಾಕವಾದ ದ್ವಿಪದಾ ಛಂದಸ್ಸಿನ ಮಂತ್ರವು
ಐದನೆಯ ಖಂಡವು — ಆಶ್ವಿನ ಶಸ್ತ್ರಮಂತ್ರಗಳ ಕೊನೆಯ ಋಕ್ಕುಗಳು ಇದರ ಎರಡು ಯಾಜ್ಯಾ ಮಂತ್ರಗಳು. ಇವು ಯಾವ ಛಂದಸ್ಸಿನವಾಗಿರಬೇಕೆಂಬ ವಿಷಯವು
ಆರನೆಯ ಖಂಡವು — ಸತ್ರವೆಂಬ ದೀರ್ಘಕಾಲಮಾಡುವ ಯಾಗದಲ್ಲಿ (ಗವಾಮಯನ) ಚತುರ್ವಿಂಶವೆಂಬ ಹೆಸರಿನ ದಿನದಲ್ಲಿ ಅನುಸರಿಸಬೇಕಾದ ಕಾರ್ಯಕಲಾಪಗಳು
ಏಳನೆಯ ಖಂಡವು — ರಥಂತರ ಮತ್ತು ಬೃಹತ್ ಎಂಬ ಎರಡು ಸಾಮಮಂತ್ರಗಳ ಪ್ರಾಧಾನ್ಯತೆಯು. ಇವೆರಡನ್ನೂ ಏಕಕಾಲದಲ್ಲಿ ಉಪಯೋಗಿಸಕೂಡದು. ಸಂವತ್ಸರದ ಉತ್ತರಾರ್ಧ ದಿನಗಳಲ್ಲಿ (ಮೊದಲನೆಯ ಅರ್ಧ — ೧೮೦ ದಿನಗಳು, ಉತ್ತರರ್ಧ ೧೮೧ ರಿಂಡ ೩೬೦ ರ ವರೆಗೆ ಇರುವ ದಿನಗಳು) ಅನುಸರಿಸಬೇಕಾದ ಯಜ್ಞಕಾಲವು ಹಿಂದುಮುಂದಾಗಿರುವುದು.
ಎಂಟನೆಯ ಖಂಡವು — ಸತ್ರಯಾಗದ ಚತುರ್ವಿಂಶ ಮತ್ತು ಮಹಾವ್ರತ ಎಂಬ ದಿನದಲ್ಲಿ ಪಠಿಸಬೇಕಾದ ನಿಷ್ಕೇವಲ್ಯ ಶಸ್ತ್ರಗಳಲ್ಲಿ ಅನುಸರಿಸಬೇಕಾದ ಕೆಲವು ವ್ಯತ್ಯಾಸಗಳು
ಹದಿನೆಂಟನೆಯ ಅಧ್ಯಾಯವು
ಸತ್ರಯಾಗದ ಷಳಹ ಮತ್ತು ವಿಷುವತ್ ಎಂಬ ದಿನಗಳು ವಿಷುವದ್ದಿನದ ಪೂರ್ವಭಾವಿಯಾಗಿಯೂ ಅನಂತರವೂ ಆದ ಕೆಲವು ದಿನಗಳಲ್ಲಿ ಆಚರಿಸಲ್ಪಡಬೇಕಾದ ಕಾರ್ಯಕಲಾಪಗಳು
ಮೊದಲನೆಯ ಖಂಡವು — ಸತ್ರಯಾಗದಲ್ಲಿರುವ ತ್ರ್ಯಹ ಮತ್ತು ಷಳಹ ಎಂಬ ಮೂರು ಮತ್ತು ಆರುದಿನಗಳ ಕಾಲವಿಶೇಷವು ಅಭಿಪ್ಲವ ಷಡಹವು
ಎರಡನೆಯ ಖಂಡವು — ಪ್ರತಿ ಮಾಸದಲ್ಲಿಯೂ ಅನುಷ್ಠನಮಾಡುವ ಐದು ಷಳಹಗಳ ಅರ್ಥವು ಮೊದಲನೇ ಷಳಹದ ಸಂಕೇತವು
ಮೂರನೆಯ ಖಂಡವು — ಗೋವುಗಳು ಸತ್ರಯಾಗವನ್ನು ಮಾಡಿದ ಪೂರ್ವೇತಿಹಾಸ ವೃತ್ತಾಂತವು ನಾನಾ ವಿಧವಾದ ಸತ್ರಯಾಗಗಳು, ಗವಾಮಯನ, ಆದಿತ್ಯಾನಾಮಯನಂ ಅಂಗಿರಸಾಮಯನಂ ಇತ್ಯಾದಿ.
ನಾಲ್ಕನೆಯ ಖಂಡವು — ಏಕವಿಂಶ ಅಥವಾ ವಿಷುವನ್ ಎಂಬ ದಿನದ ಕಾರ್ಯಕಲಾಪಗಳು
ಐದನೆಯ ಖಂಡವು — ಸ್ವರಸಾಮಗಳು, ಅಭಿಜಿತ್, ವಿಶ್ವಜಿತ್, ವಿಷುವನ್ ಇತ್ಯಾದಿಗಳ ವಿವರಣೆಯು
ಆರನೆಯ ಖಂಡವು — ಹಂಸವತೀ ಋಕ್ಕಿನ (ಹಂಸಃ ಶುಚಿಷತ್ ಎಂಬ ಋಕ್ಕು) ವಿವರಣೆಯು; ದುರೋಹಣವೆಂಬ ಕಷ್ಟಸಾಧ್ಯವಾದ ಸ್ವರ್ಗಕ್ಕೆ ಹತ್ತಿಹೋಗುವ ಮಾರ್ಗಕ್ಕೆ ಸಾಧನಭೂತವಾದ ತಾಕ್ಷವೆಂಬ ಮೂರು ಋಕ್ಕುಗಳು. ಈ ಎರಡು ವಿಧವಾ ಋಕ್ಕುಗಳ ವಿವರನೆಯು
ಏಳನೆಯ ಖಂಡವು — ದೂರೋಹಣವೆಂಬ ಮಂತ್ರವನ್ನು ಪಠಿಸುವ ವಿಧಾನವು
ಎಂಟನೆಯ ಖಂಡವು — ವಿಷುವದ್ದಿನದ ಸಾದೃಶ್ಯವು. ವಿಷುವದ್ದಿನದ ಶಸ್ತ್ರಮಂತ್ರಗಳನ್ನು ಸತ್ರಯಾಗದ ಇತರ ದಿನಗಳಲ್ಲಿ ಪಠಿಸಬಹುದೇ, ಕೂಡಾದೇ ಎಂಬ ವಿಷಯವೂ ವಿಷುವದ್ದಿನವನ್ನು ಆಚರಿಸುವ ಮಹತ್ತ್ವವು. ಈ ದಿವಸಗಳಲ್ಲಿ ವಿಶ್ವಕರ್ಮದೇವತೆಯನ್ನು ಉದ್ದೇಶಿಸಿ ಸಮರ್ಪಿಸಬೇಕಾದ ಸವನೀಯ ಪಶುವಿನ ವಿಷಯವು.
ಹತ್ತೊಂಬತ್ತನೆಯ ಖಂಡವು —
ದ್ವಾದಶಾಹವೆಂಬ ಯಾಗವು. ಈ ಯಾಗದ ಪೂರ್ವೇತಿಹಾಸ ಮತ್ತು ಅದನ್ನು ಆಚರಿಸುವ ವಿಧಿನಿಯಗಳು ಪ್ರಾರಂಭದಲ್ಲಿ ಮಾಡಬೇಕಾದ ಕರ್ಮಾದಿಗಳು.
ಮೊದಲನೆಯ ಖಂಡವು — ದ್ವಾದಶಾಹವೆಂಬ ಯಾಗದ ಪೂರ್ವೇತಿಹಾಸ, ಅದರ ಗಾಯತ್ರೀ ಸ್ವರೂಪವು.
ಎರಡನೆಯ ಖಂಡವು — ದ್ವಾದಶಾಹದ ನಾನಾ ವಿಭಾಗಗಳು; ಮತ್ತು ಅವುಗಳ ಕಾಲಪರಿಮಾಣ. ಈ ಯಾಗದಲ್ಲಿ ಬೃಹತೀಛಂದಸ್ಸಿನ ಸ್ವರೂಪವು. ಬೃಹತೀಛಂದಸ್ಸಿನ ಸ್ವರೂಪವಿವರಣೆ.
ಮೂರನೆಯ ಖಂಡವು — ಪ್ರಜಾಪತಿಯು ಈ ದ್ವಾದಶಾಹವನ್ನು ನಿಯಮಿಸಿ ರೂಢಿಗೆ ತಂದನು. ಈ ದ್ವಾದಶಾಹದ ಸ್ವರೂಪವು. ಈ ದ್ವಾದಶಾಹವನ್ನು ಮಾಡಲು ಯಾರು ಅರ್ಹರು? ಇತ್ಯಾದಿ.
ನಾಲ್ಕನೆಯ ಖಂಡವು — ದ್ವಾದಶಾಹದಲ್ಲಿ ದೀಕ್ಷಾವಿಧಿಯನ್ನು ಯಾವಾಗ ಆಚರಿಸಬೇಕು? ಪ್ರಜಾಪತಿಗೆ ಅರ್ಪಿಸಬೇಕಾದ ಪಶುವು ಜಮದಗ್ನಿಋಷಿದೃಷ್ಟವಾದ ಸಾಮಿಧೇನೀಮಂತ್ರಗಳನ್ನು ಪಠಿಸಬೇಕು. ವಾಯುವಿಗೆ ಪುರೋಡಾಶವು. ದ್ವಾದಶಾಹವನ್ನು ಸತ್ರಯಾಗವೆಂದು ಪತಿಗಣಿಸಿ ಮಾಡುವಾಗ ಆಚರಿಸಬೇಕಾದ ಕೆಲವು ವಿಶೇಷ ವಿಧಿಗಳು.
ಐದನೆಯ ಖಂಡವು — ಛಂದಸ್ಸುಗಳ ಸ್ಪರ್ಧೆಯು ಪೃಥಿವೀ ಮತ್ತು ಸ್ವರ್ಗಲೋಕಗಳು ಬೇರೆ ಯಾಗಿದ್ದವು. ವಿದಾಹದಿಂದ ಅವು ಸಮೀಪಿಸಿದವು. ಸಾಮಮಂತ್ರಗಳಿಂದ ಅವು ಪರಸ್ಪರ ವಿವಾಹವಾದವು. ಚಂದ್ರನಲ್ಲಿ ಕಾಣಬರುವ ತಪ್ಪುಪ್ರದೇಶವು (ಚಿಕ್ಕಿಯು) ಪೋಷಾ ಮತ್ತು ಉಷಾ ಎಂಬ ಶಬ್ದಗಳ ಅರ್ಥವಿವರಣೆಯು.
ಆರನೆಯ ಖಂಡವು — ಸಾಮಪೃಷ್ಠವೆಂಬ ವಿಷಯವು
ಇಪ್ಪತ್ತನೆಯ ಅಧ್ಯಾಯವು
ದ್ವಾದಶಾಹವೆಂಬ ಮೊದಲ ಎರಡು ದಿನಗಳ ವಿವರಣೆ
ಮೊದಲನೆಯ ಖಂಡವು — ಈ ದ್ವಾದಶಾಹದ ಮೊದಲನೇ ದಿನದಲ್ಲಿ ಪ್ರಾತಃಸವನ ಮತ್ತು ಮಾಧ್ಯಂದಿನ ಸವನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು.
ಎರಡನೆಯ ಖಂಡವು — ನಿಷ್ಕೇಲ್ಯಶಸ್ತ್ರದ ಉಳಿದ ಭಾಗಗಳು ಮತ್ತು ತೃತೀಯಸವನದಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು.
ಮೂರನೆಯ ಖಂಡವು — ದ್ವಾದಶಾಹದ ಮಂತ್ರಗಳಲ್ಲಿ ಕಂಡುಬರುವ ಎರಡನೇ ವಿವಸದ ರೂಪ ಲಕ್ಷಣಗಳು. ಪ್ರಾತಸ್ಸವನ ಮತ್ತು ಮಾಧ್ಯಂದಿನಸವನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು. ಮನುವಿನ ಪುತ್ರನಾದ ಶಾರ್ಯಾತನ ವೃತ್ತಾಂತವು.
ನಾಲ್ಕನೆಯ ಖಂಡವು — ನಿಷ್ಕೇಲ್ಯಶಸ್ತ್ರದ ಉಳಿದ ಭಗಗಳು ಮತ್ತು ಎರಡನೇ ದಿವಸದಲ್ಲಿ ಪಠಿಸಬೇಕಾದ ತೃತೀಯಸವನದ ಶಸ್ತ್ರಮಂತ್ರಗಳು
ಇಪ್ಪತ್ತೊಂದನೆಯ ಅಧ್ಯಾಯವು
ದ್ವಾದಶಾಹವೆಂಬ ಯಾಗದ ಮೂರು ಮತ್ತು ನಾಲ್ಕನೆಯ ದಿವಸಗಳ ಕಾರ್ಯಕಲಾಪಗಳು ಮತ್ತು ಲಕ್ಷಣಗಳು
ಮೊದಲನೆಯ ಖಂಡವು — ಮೂರನೆಯ ದಿವಸದಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳ ಲಕ್ಷಣಗಳು ಪ್ರಾತಸ್ಸವನ ಮತ್ತು ಮಾಧ್ಯಂದಿನಸವನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು
ಎರಡನೇ ಖಂಡವು — ನಿಷ್ಕೇವಲ್ಯಶಸ್ತ್ರದ ನಿವಿನ್ಮಂತ್ರಗಳು ಮೂರನೆಯ ದಿವಸದ ತೃತೀಯಸವನದಲ್ಲಿ ಪಠಿಸಬೇಕಾದ ಶಸ್ತ್ರಗಳು
ಮೂರನೆಯ ಖಂಡವು — ನ್ಯೂಂಖದ ವಿಷಯವು
ನಾಲ್ಕನೆಯ ಖಂಡವು — ನಾಲ್ಕನೆಯ ದಿವಸದ ಕಾರ್ಯಕಲಾಪಗಳು. ಪ್ರಾತಸ್ಸವ ಮತ್ತು ಮಾಧ್ಯಂದಿನಸವನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು.
ಐದನೆಯ ಖಂಡವು — ನಿಷ್ಕೇವಲ್ಯಶಸ್ತ್ರದ ಉಳಿದ ಮಂತ್ರಗಳು, ತೃತೀಯಸವನದಲಿ ಪಠಿಸಬೇಕಾದ ತಸ್ತ್ರಮಂತ್ರಗಳು ಇತ್ಯಾದಿ.
ಇಪ್ಪತ್ತೆರಡನೆಯ ಅಧ್ಯಾಯವು —
ಈ ದ್ವಾದಶಾಹ ಯಜ್ಞದ ಐದು ಮತ್ತು ಆರನೇ ದಿವಸಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳ ಲಕ್ಷಣಗಳು
ಮೊದಲನೆಯ ಖಂಡವು — ದ್ವಾದಶಾಹದ ಐದನೇ ದಿವಸದಲ್ಲಿ ಪಠಿಸಬೇಕಾದ ಸಶ್ತ್ರಮಂತ್ರಗಳ ಲಕ್ಷಣಗಳು. ಈ ದಿವಸದ ಪ್ರಾತಸ್ಸವನ ಮತ್ತು ಮಾಧ್ಯಂದಿನಸವನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು.
ಎರಡನೆಯ ಖಂಡವು — ಶಾಕ್ವರಸಾಮ ಮತ್ತು ಮಹಾನಾಈ ಋಕ್ಕುಗಳ ವಿಷಯ; ನಿಷ್ಕೇಲ್ಯಶಸ್ತ್ರವು.
ಮೂರನೆಯ ಖಂಡವು — ನಿಷ್ಕೇವಲ್ಯಶಸ್ತ್ರದ ಉಳಿದ ಭಾಗಗಳು; ತೃತೀಯಸವನದ ಶಸ್ತ್ರಮಂತ್ರಗಳು
ನಾಲ್ಕನೆಯ ಖಂಡವು — ಆರನೇ ದಿವಸದಲ್ಲಿ ಆಚರಿಸುವ ಋತುಯಾಜವೆಂಬ ಹೋಮವು
ಐದನನೆಯ ಖಂಡವು — ಪರುಚ್ಛೇಪಋಷಿದೃಷ್ಟವಾದ ಋಕ್ಕುಗಳ ಲಕ್ಷಣವು ಮತ್ತು ಅರ್ಥವೂ ಸಹ.
ಆರನೆಯ ಖಂಡವು — ಪಾರುಚ್ಛೇಪೀಯ ಋಕ್ಕುಗಳ ಪೂರ್ವವಿವರಣೆ.
ಏಳನೆಯ ಖಂಡವು — ಆರನೆಯ ದಿವಸದ ಕಾರ್ಯಕಲಾಪಗಳು, ಪ್ರಾತಸ್ಸವನ ಮತ್ತು ಮಾಧ್ಯಂದಿನ ಸವನದಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು.
ಎಂಟನೆಯ ಖಂಡವು — ನಿಷ್ಕೇಲ್ಯಶಸ್ತ್ರದ ಉಳಿದ ಭಾಗಗಳು ಮತ್ತು ತೃತೀಯಸವನದ ಶಸ್ತ್ರ ಮಂತ್ರಗಳು
ಒಂಭತ್ತನೆಯ ಖಂಡವು — ಮನುವಿನ ಪುತ್ರನಾದ ನಾಭಾನೇದಿಷ್ಠನ ವೃತ್ಟಾಂತವು
ಹತ್ತನೆಯ ಖಂಡವು — ತೃತೀಯಸವನದಲ್ಲಿ ಪಠಿಸಬೇಕಾದ ಸಹಚರಶಸ್ತ್ರಮಂತ್ರಗಳು ನಾಭಾನೇದಿಷ್ಠ, ವಾಲಖಿಲ್ಯ, ಸುಕೀರ್ತಿ, ಸೂಕ್ತಗಳು, ವಾಷಾಕಪಿ ಮತ್ತು ಏವಯಾಮರುತ್ ಎಂಬ ಆರನೆಯ ದಿವಸ ಪಠಿಸಬೇಕಾದ ಅಗ್ನಿ ಮಾರುತಶಸ್ತ್ರವು
ಇಪ್ಪತ್ತಮೂರನೆಯ ಅಧ್ಯಾಯವು
ದ್ವಾದಶಾಹವೆಂಬ ಯಜ್ಞದ ಏಳು ಮತ್ತು ಎಂಟನೇ ದಿನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳ ಲಕ್ಷಣಗಳು
ಮೊದಲನೆಯ ಖಂಡವು — ದ್ವಾದಶಾಹದ ಏಳನೆಯ ದಿವಸದ ಮಂತ್ರಗಳಲ್ಲಿರಬೇಕಾದ ಲಕ್ಷಣಗಳು ಪ್ರಾತಸ್ಸವನ ಮತ್ತು ಮಾಧ್ಯಂದಿನಸವನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು
ಎರಡನೆಯ ಖಂಡವು — ನಿಷ್ಕೇಲ್ಯಶಸ್ತ್ರದ ಉಳಿದ ಭಾಗಗಳು. ತೃತೀಯಸವನದ ಶಸ್ತ್ರಮಂತ್ರಗಳು
ಮೂರನೆಯ ಖಂಡವು — ದ್ವಾದಶಾಹದ ಎಂಟನೇ ದಿನದ ಕಾರ್ಯಕಲಾಪಗಳು ಮತ್ತು ಆ ದಿನದ ಮಂತ್ರಗಳಲ್ಲಿರಬೇಕಾದ ಲಕ್ಷಣಗಳು. ಆ ದಿವಸದ ಪ್ರಾತಸ್ಸವನ್ನು ಮತ್ತು ಮಾಧ್ಯಂದಿನಸವನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು
ನಲ್ಕನೆಯ ಖಂಡವು — ನಿಷ್ಕೇಲ್ಯಶಸ್ತ್ರದ ಮಹದ್ವತ್ಸೂಕ್ತಗಳು; ತೃತೀಯಸವನದಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು
ಇಪ್ಪತ್ತನಾಲಕನೆಯ ಅಧ್ಯಾಯವು
ದ್ವಾದಶಾಹಯಾಗದ ಒಂಭತ್ತು ಮತ್ತು ಹತ್ತನೆಯ ದಿವಸಗಳ ಕಾರ್ಯಕಲಾಪಗಳು; ಈ ಯಾಗದ ಪರಿಸಮಾಪ್ತಿಯು
ಮೊದಲನೆಯ ಖಂಡವು — ದ್ವಾದಶಾಹದ ಒಂಭತ್ತನೇ ದಿವಸದ ಕಾರ್ಯಕಲಾಪಗಳು. ಪ್ರಾತಸ್ಸವನ ಮತ್ತು ಮಾಧ್ಯಂದಿನಸವನಗಳಲ್ಲಿ ಪಠಿಸಬೇಕಾದ ಶಸ್ತ್ರಮಂತ್ರಗಳು.
ಎರಡನೆಯ ಖಂಡವು — ನಿಷ್ಕೇವಲ್ಯಶಸ್ತ್ರದ ಉಳಿದ ಭಾಗಗಳು; ತೃತೀಯಸವನದಲ್ಲಿ ಪಠಿಸಬೆಕಾದ ಶಸ್ತ್ರ ಮಂತ್ರಗಳು
ಮೂರನೆಯ ಖಂಡವು — ದ್ವಾದಶಾಹದ ನಾನಾಭಾಗಗಳನ್ನು ಯಾವುದಕ್ಕೆ ಹೋಲಿಸಬಹುದು? ಹತ್ತನೇ ದಿವಸದ ಕಾರ್ಯಕಲಾಪಗಳು
ನಾಲ್ಕನೆಯ ಖಂಡವು — ಸರ್ಪರಾಜ್ಞೀಋಕ್ಕುಗಳ ಪಠನವು ಚತುರ್ಹೋತ್ರಮಂತ್ರಪಠನವು ಇವುಗಳ ಫಲಿತಾಂಶ. ಇವುಗಳನ್ನು ಯಾರು ಪಠಿಸಬೇಕು?
ಐದನೆಯ ಖಂಡವು — ದ್ವಾದಶಾಹಸತ್ರದ ಹತ್ತನೆಯ ದಿನ ಋತ್ವಿಜರು ಯಾವಾಗ ಮತ್ತು ಹೇಗೆ ತಮ್ಮ ಮೌನವನ್ನು ಸಮಾಪ್ತಿಗೊಳಿಸುವರು?
ಆರನೆಯ ಖಂಡವು — ಚಾತುರ್ಹೋತೃಮಂತ್ರಗಳು, ಪ್ರಜಾಪತಿಯ ಶರೀರಗಳು. ಬ್ರಹ್ಮೋದ್ಯವು. ಯಜ್ಞಕರ್ತರಾದ ಯಜಮಾನರು ಸ್ವರ್ಗದಲ್ಲಿ ತಮ್ಮ ಸ್ಥಾನಕ್ಕೆ ಹೋಗಿ ಸೇರುವರು
ಇಪ್ಪತ್ತೈದನೆಯ ಅಧ್ಯಾಯವು
ಅಗ್ನಿಹೋತ್ರವು ಬ್ರಹ್ಮನೆಂಬ ಋತ್ವಿಜನ ಕರ್ತವ್ಯವು
ಮೊದಲನೆಯ ಖಂಡವು — ಅಗ್ನಿಹೋತಉ ಯಜ್ಞಮಾಡುವ ಯಜಮಾನನು ಅಹವನೀಯ ಕುಂಡಕ್ಕೆ ಅಗ್ನಿಯನ್ನು ತರುವಂತೆ ಪುರೋಹಿತರಿಗೆ ಹೇಳುವುದು. ಅಗ್ನಿಹೋತ್ರದ ಹರಿನಾರು ಭಾಗಗಳು
ಎರಡನೆಯ ಖಂಡವು — ಅಗ್ನಿಹೋತ್ರದ ಆಹುತಿಗಳನ್ನು ಅಗ್ನಿಯಲ್ಲಿ ಅರ್ಪಿಸುವಾಗ ಕಾರಣಾಂತರಗಳಿಂದ ಸಂಭವಿಸಬಹುದಾದ ಕೆಲವು ಅಪಘಾತಗಳನ್ನು ಪುರೋಹಿತನು ಹೇಗೆ ಪರಿಹರಿಸಬೇಕೆಂಬ ವಿಚಾರ.
ಮೂರನೆಯ ಖಂಡವು — ಅಗ್ನಿಹೋತ್ರದ ಅರ್ಥವು ಅದನ್ನು ಸರಿಯಾದ ಕ್ರಮದಲ್ಲಿ ಅನುಷ್ಠನ ಮಾಡಿದರೆ ಅದರ ಅರ್ಥವು. ಇದು ದಕ್ಷಿಣೆಯನ್ನು ತಿಳಿಸುವುದು. ಆಶ್ವಿನಶಸ್ತ್ರ ಮಹಾವ್ರತ, ಅಗ್ನಿಚಯನ ಎಂಬ ಕಾರ್ಯಗಳು ಇದರಲ್ಲಿ ಭಾಸವಾಗಿರುವವು.
ನಲ್ಕನೆಯ ಖಂಡವು — ಅಗ್ನಿಹೋತ್ರಿಯಾದವನು ಅಗ್ನಿಹೋತ್ರಹೋಮವನ್ನು ಮಾಡುವಾಗ ಪ್ರಾತಃಕಾಲದಲ್ಲಿ ಮಾಡುವ ಅಗ್ನಿಹೋತ್ರವನ್ನು ಸೂರ್ಯೋದಯಕ್ಕೆ ಪೂರ್ವದಲ್ಲಿ ಮಾಡಬೇಕೆ ಅಥವಾ ಸೂರ್ಯೋದಯಾನಂತರ ಮಾಡಬೇಕೇ ಎಂಬ ವಿಷಯ
ಐದನೆಯ ಖಂಡವು — ಅಗ್ನಿಹೋತ್ರವನ್ನು ಸೂರ್ಯೋದಯಾನಂತರ ಮಾಡಬೆಕೆಂಬ ವಿಚಾರವನ್ನು ಸಮರ್ಥಿಸುವುದಕ್ಕಾಗಿ ಹೇಳಲಾದ ಕೆಲವು ಋಕ್ಕುಗಳು
ಆರನೆಯ ಖಂಡವು — ಪ್ರಾತರಗ್ನಿ ಹೋತ್ರವನ್ನು ಯಾವಾಗಲೂ ಸೂರ್ಯೋದಯಾನಂತರವೇ ಮಾಡಬೇಕು.
ಏಳನೆಯ ಖಂಡವು — ಪ್ರಪಂಚ ಸೃಷ್ಟಿವಿಚಾರ ವೇದ ಮತ್ತು ಇತರ ಸದ್ಗ್ರಂಥಗಳ ಉತ್ಪತ್ತಿಯು. ಯಜ್ಞಯಾಗಾದಿದಿಗಳಲ್ಲಿ ಸಂಭವಿಸುವ ಲೋಪದೋಷಗಳಿಗೆ ಪರಿಹಾರಾರ್ಥವಾಗಿ ಮಾಡಬೇಕಾದ ಪ್ರಾಯಶ್ಚಿತ್ತಾದಿ ವಿಧಿಗಳು
ಎಂಟನೆಯ ಖಂಡವು — ಯಜ್ಞದಲ್ಲಿ ಬ್ರಹ್ಮನೆಂಬ ಋತ್ವಿಜನ ಕರ್ತವ್ಯವು. ಯಜ್ಞದಲ್ಲಿ ಮಾಡಲ್ಪಡುವ ಮುಖ್ಯವಾದ ಕಾರ್ಯಕಲ್ಪಾಗಳಲ್ಲಿ ಅವನು ಸುಮ್ಮನಿರ (ಮೌನವಾಗಿರ) ಬೇಕು.
ಒಂಭತ್ತನೆಯ ಖಂಡವು — ಬ್ರಹ್ಮನೆಂಬ ಋತ್ವಿಜನು ಯಜ್ಞದಲಿ ನೆರವೇರಿಸುವ ಭಾಗವು ಸಾಮಗಾನಮಾಡುವವರನ್ನು ಗಾನಮಾಡುವಂತೆ ಅನುಮತಿಯಾಯುವುದು
ಇಪ್ತತ್ತಾರನೆ ಅಧ್ಯಾಯವು
ಗ್ರಾವಸ್ತುತ್ ಮತ್ತು ಸುಬ್ರಹ್ಮಣ್ಯ ಎಂಬ ಋತ್ವಿಜರ ಕರ್ತವ್ಯಕರ್ಮಗಳು
ಮೊದಲನೆಯ ಖಂಡವು — ಗ್ರಾವಸ್ತುತ್ ಎಂಬ ಋತ್ವಿಜನ ಕರ್ತವ್ಯದ ವಿಷಯದಲ್ಲಿ ಪೂರ್ವೇತಿಹಾಸವು ಸರ್ಪಋಷಿ ಎಂದು ಹೆಸರಿನಿಂದ ಪ್ರಸಿದ್ಧನಾದ ಅರ್ಬುದಋಷಿಯ ವಿಷಯವು
ಎರಡನೆಯ ಖಂಡವು — ಹಿಂದೆ ಹೇಳಿದಂತೆ ಈ ಗ್ರಾವಸ್ತುತ್ ಎಂಬ ಸೋಮಲತೆಗಳನ್ನು ಜಜ್ಜುವ ಕಲ್ಲುಗಳನ್ನು ಸ್ತುತಿಸುವಾಗ ಎಷ್ಟು ಋಕ್ಕುಗಳನ್ನು ಪಠಿಸಬೇಕು? ಇವುಗಳನ್ನು ಹೇಗೆ ಪಠಿಸಬೇಕು? ಈ ಸ್ತುತಿಗಳನ್ನು ಯಾವಾಗಲೂ ಮಾಧ್ಯಂದಿನಸವನಕಾಲದಲ್ಲಿ ಮಾತ್ರ ಪಠಿಸಬೇಕು. ಇತರ ಕಾಲಗಳಲಿ ಪಠಿಸಕೂಡದು.
ಮೂರನೆಯ ಖಂಡವು — ಸುಬ್ರಹ್ಮಣ್ಯನೆಂಬ ಋತ್ವಿಜನು ಪಠಿಸಬೇಕಾದ ಮಂತ್ರಗಳು ಮತ್ತು ಅವುಗಳ ಸ್ವರೂಪವು. ಅವುಗಳನ್ನು ಯಾರು ಪಠಿಸಬೇಕು? ಪಾತ್ನೀವತಗ್ರಹದಿಂದ ಮಾಡುವ ಆಹುತಿಯು. ಅಗ್ನೀಧ್ರನಿಂದ ಮಾಡುವ ಯಾಜ್ಯಾಮಂತ್ರವು.
ಇಪ್ಪತ್ತೇಳನೆಯ ಅಧ್ಯಾಯವು
ಸತ್ರಯಾಗದಲ್ಲಿ ಋತ್ವಿಕ್ಕುಗಳಿಗೆ ಸಹಾಯಕರಾದ ಹೋತ್ರಕರೆಂಬ ಋತ್ವಿಕ್ಕುಗಳು (ಋತ್ವಿಗ್ವರ್ಗದವರು) ಪಠಿಸಬೇಕಾದ ಕೆಲವು ಶಸ್ತ್ರಮಂತ್ರಗಳು.
ಮೊದಲನೆಯ ಖಂಡವು — ಪ್ರಾತಸ್ಸವನ ಮತ್ತು ತೃತೀಯಸವನಗಳಲ್ಲಿ ಹೋತೃವರ್ಗದವರು ಪಠಿಸಬೇಕಾದ ಶಸ್ತ್ರಮಂತ್ರಗಳು.
ಎರಡನೆಯ ಖಂಡವು — ಮಾರನೇ ದಿನ ಶಸ್ತ್ರಾದಿಗಳನ್ನು ಹಿಂದಿನ ದಿನದ ಅನುರೂಪಮಂತ್ರಗಳನ್ನಾಗಿ ಹೋತೃವರ್ಗದವರು ಪಠಿಸುವರು. ಇದು ಅನೇಕ ದಿನಗಳವರೆಗೂ ನಡೆಯುವುದು.
ಮೂರನೆಯ ಖಂಡವು — ಆಹವನೀಯ ಸೋಮಯಜ್ಞದಲ್ಲಿ ಹೋತೃವರ್ಗದ ಋತ್ವಿಜರು ಪಠಿಸಬೇಕಾದ ಪ್ರಾರಂಭದ ಋಕ್ಕುಗಳನ್ನೊಳಗೊಂಡ ಶಸ್ತ್ರಮಂತ್ರಗಳು. ಈ ಯಜ್ಞಭಾಗವು ಅನೇಕ ದಿನಗಳವರೆಗೂ ನಡೆಯುವುದು.
ನಾಲ್ಕನೆಯ ಖಂಡವು — ಹೋತೃವರ್ಗದ ಋತ್ವಿಕ್ಕುಗಳು ಪಠಿಸುವ ಅಹೀನ ಮತ್ತು ಐಕಾಹಿಕ ಎಂಬ ಯಜ್ಞಕರ್ಮದ ಶಸ್ತ್ರಮಂತ್ರಗಳಲ್ಲಿರುವ ಋಕ್ಕುಗಳು.
ಐದನೆಯ ಖಂಡವು — ಹೋತೃವರ್ಗದ ಋತ್ವಿಜರು ಪಠಿಸಬೇಕಾದ ಅಹೀನ ಮತ್ತು ಅಕಾಹಿತ ಎಂಬ ಕರ್ಮಗಳ ಶಸ್ತ್ರಮಂತ್ರಗಳು ಇತ್ಯಾದಿ.
ಇಪ್ಪತ್ತೆಂಟನೆಯ ಅಧ್ಯಾಯವು
ಮೊದಲನೆಯ ಖಂಡವು — ಪ್ರಾತಸ್ಸವನ, ಮಾಧ್ಯಂದಿನಸವನ, ತೃತೀಯಸವನಗಳಲ್ಲಿ ಬಟ್ಟಲುಗಳನ್ನು ಸೋಮರಸದಿಂದ ತುಂಬುವಾಗ ಅವುಗಳನ್ನು ಮೇಲಕ್ಕೆತ್ತುವ ಕಾಲದಲ್ಲಿ ಹೋತೃವು ಪಠಿಸುವ ಮಂತ್ರಗಳು
ಎರಡನೆಯ ಖಂಡವು — ಪ್ರಾತಸ್ಸವನಕಾಲದಲ್ಲಿ ಸಪ್ತಹೋತೃಗಳು ಪಠಿಸಬೇಕಾದ ಮಂತ್ರಗಳ ವಿವರಣೆಯು.
ಮೂರನೆಯ ಖಂಡವು — ಮಾಧ್ಯಂದಿನ ಸವನದ ವಿವರಣೆಯು.
ನಾಲ್ಕನೆಯ ಖಂಡವು — ತೃತೀಯಸವನದ ವಿವರಣೆಯು.
ಐದನೆಯ ಖಂಡವು — ಶಸ್ತ್ರಮಂತ್ರಗಳ ಸಂಬಂಧವಿಲ್ಲದ ದೇವತೆಗಳ ವಿಷಯದಲ್ಲಿ ಬೇರೆ ಶಸ್ತ್ರಮಂತ್ರಗಳನ್ನು ಹೇಳಬೇಕಾದ ಹೋತೃಗಳ ವಿಷಯ; ತೃತಿಯಸವನಕಾಲದಲ್ಲಿ ಹೋತೃವರ್ಗದ ಋತ್ವಿಜರು ಸಿದ್ಧಪಡಿಸುವ ಶಸ್ತ್ರಮಂತ್ರಗಳು.
ಆರನೆಯ ಖಂಡವು — ಆಗ್ನೀಧ್ರ, ಹೋತೃ ಮತ್ತು ನೇಷ್ಟಾ ಎಂಬ ಋತ್ವಿಜರ ಶಸ್ತ್ರಮಂತ್ರಗಳು ಹೇಗೆ ಪಠಿಸಲ್ಪಡುತ್ತವೆ, ಪೋತೃ ಮತ್ತು ನೇಷ್ಟೃ ಎಂಬ ಋತ್ವಿಜರನ್ನುದ್ದೇಶಿಸಿ ಹೇಳುವ ಪ್ರೈಷಮಂತ್ರಗಳು. ಆಚ್ಛಾವಾಕನು ಪಠಿಸುವ ಹೆಚ್ಚಿನ ಮಂತ್ರವು. ಹೋತೃವು ಪಠಿಸಬೇಕಾದ ಹೋತಾಯಕ್ಷತ್ ಎಂದು ಪ್ರಾರಂಭವಾಗುವ ಮಂತ್ರಗಳು, ಪೋತೃ, ನೇಷ್ಟು ಮತ್ತು ಅಗ್ನೀಧ್ರರಿಗೆ ಹೇಗೆ ಅನ್ವಯಿಸುತ್ತವೆ? ಮಂತ್ರವನ್ನು ಪಠಿಸುವವರಿಗೆ ಅನ್ವಯಿಸುವ ಪ್ರೈಷಮಂಟ್ರವು. ತೃತೀಯಸವನದಲ್ಲಿ ಪಠಿಸಲ್ಪಡುವ ಶಸ್ತ್ರ ಮತ್ತು ಸ್ತೋತ್ರಿಯಮಂತ್ರಗಳ ದೇವತೆಗಳಿಗೆ ಇರುವ ಪರಸ್ಪರ ವ್ಯತ್ಯಾಸವು
ಏಳನೆಯ ಖಂಡವು — ತೃತೀಯಸವನದಲ್ಲಿ ಇಂದ್ರನನ್ನುದ್ದೇಶಿಸಿ ಪಠಿಸುವ ಜಗತೀಛಂದಸ್ಸಿನ ಸೂಕ್ತಗಳು. ಅಚ್ಚಾವಾಕನು ಪಠಿಸಬೇಕಾದ ಸೂಕ್ತವು. ಮೈತ್ರಾವರುಣ, ಬ್ರಾಹ್ಮಣಾಚ್ಛಂಸಿ ಮತ್ತು ಅಚ್ಛಾವಾಕ ಎಂಬ ಋತ್ವಿಜರು ಪರಿಸಮಾಪ್ತಿಯಾಗಿ ಪಠಿಸುವ ಋಕ್ಕುಗಳು. ಸೋಮಾಭಿಷವದ ದಿನದಲ್ಲಿ ಪಠಿಸಲ್ಪಡುವ ಕೊನೆಯ ಶಸ್ತ್ರಮಂತ್ರದ ಕೊನೆಯ ನಾಲ್ಕು ಅಕ್ಷರಗಳನ್ನು ಎರಡಾವರ್ತಿ ಪಠಿಸಬೇಕು.
ಎಂಟನೆಯ ಖಂಡವು — ಶ್ಲಿಪಶಸ್ತ್ರಮಂತ್ರದ ಕೊನೆಯಲ್ಲಿ ನಾರಾಶಂಸನನ್ನುದ್ದೇಶಿಸಿ ಪಠಿಸುವ ಮಂತ್ರಗಳನ್ನು ಅಚ್ಛಾವಾಕನು ಏತಕ್ಕೆ ಪಠಿಸುವುದಿಲ್ಲ?
ಇಪ್ಪತ್ತೊಂಭತ್ತನೆಯ ಅಧ್ಯಾಯವು
ಮೊದಲನೆಯ ಖಂಡವು — ಸಂಪಾತಸೂಕ್ತಗಳು, ವಾಲಖಿಲ್ಯಸೂಕ್ತಗಳು, ದೂರೋಹಣಸೂಕ್ತಗಳು
ಎರಡನೆಯ ಖಂಡವು — ಸಂಪಾತಸೂಕ್ತಗಳ ವಿಷಯ ಸಂಪಾತಸೂಕ್ತಕ್ಕೆ ಪ್ರತಿಯಾದ (ವಿರೋಧವಾದ) ಸೂಕ್ತಗಳು ಅಚ್ಚಾವಾಕನು ಪಠಿಸುವ ಸೂಕ್ತದಲ್ಲಿರುವ ವಿಶೇಷಸಂಗತಿ
ಮೂರನೆಯ ಖಂಡವು — ಸಂಪಾತಸೂಕ್ತಗಳನ್ನು ಯಾರು, ಯಾವ ದಿನಗಳಲ್ಲಿ ಯಾವ ನಿಯಮ ಪ್ರಕಾರ ಪಠಿಸಬೇಕೆಂಬ ವಿಷಯ, ಅವಪನಸೂಕ್ತಗಳು.
ನಾಲ್ಕನೆಯ ಖಂಡವು — ಸಂಪಾತಸೂಕ್ತಗಳಿಗೆ ಪೂರ್ವಭಾವಿಯಾಗಿ ಮೈತ್ರಾವರುಣಾದಿ ಋತ್ವಿಜರು ಪಠಿಸುವ ಇತರ ಸೂಕ್ತಗಳು
ಐದನೆಯ ಖಂಡವು — ಕದ್ವತ್ ಎಂಬ ಸೂಕ್ತಗಳು ಮತ್ತು ತ್ರಿಷ್ಟುಪ್ ಛಂದಸ್ಸಿನ ವಿಹಯ
ಆರನೆಯ ಖಂಡವು — ಹೋತೃವರ್ಗದ ಋತ್ವಿಜರು ಪಠಿಸುವ ತಿಷ್ಟುಪ್ ಛಂದಸ್ಸಿನ ಮಂತ್ರಗಳು
ಏಳನೆಯ ಖಂಡವು — ಅಹೀನ ಎಂಬ ಸಂಸ್ಕಾರವನ್ನು ಹೇಗೆ ಸೇರಿಸಬೇಕು ಮತ್ತು ಹೇಗೆ ತೆಗೆಯಬೇಕು ಇತ್ಯಾದಿ
ಎಂಟನೆಯ ಖಂಡವು — ವಾಲಖಿಲ್ಯಸೂಕ್ತದ ವಿವರಗಳು ಮತ್ತು ಅವುಗಳನ್ನು ಹೇಗೆ ಪಸಿಅಬೇಕೆಂಬ ವಿಚಾರ.
ಒಂಭತ್ತನೆಯ ಖಂಡವು — ದೂರೋಹಣಸೂಕ್ತಕ್ಕಾಗಿ ಯಾವ ವಿಧವಾದ ಸೂಕ್ತವನ್ನು ಆರಿಸಿಕೊಳ್ಳಬೇಕು?
ಹತ್ತನೆಯ ಖಂಡವು — ಮೈತ್ರಾವರುಣನೆಂಬ ಋತ್ವಿಜನು ದೂರೋಹಣಮಂತ್ರದ ಜತೆಯಲ್ಲಿ ಅಹೀನ ಮತ್ತು ಏಕಾಹಿಸೂಕ್ತಗಳನ್ನು ಪಠಿಸಬೇಕೇ ಬೇಡವೇಎಂಬ ವಿಚಾರ
ಮೂವತ್ತನೆಯ ಅಧ್ಯಾಯವು
ಶಿಲ್ಪದ ವಿಷಯ, ನಾಭಾನೇದಿಷ್ಟ, ನಾರಾಶಂಸ, ವಾಲಖಿಲ್ಯ, ಸುಕೀರ್ತಿ, ವೃಷಾಕಪಿ ಮತ್ತು ಏನಯಾಮರುತ್ ಎಂಬ ಸೂಕ್ತಗಳು, ಕುಂತಾಪ ಶಸ್ತ್ರಮಂತ್ರವು
ಮೊದಲನೇ ಖಂಡವು — ನಾಭಾನೇದಿಷ್ಠ ಮತ್ತು ನಾರಾಶಂಸ ಸೂಕ್ತಗಳು ಇವುಗಳನ್ನು ಹೋತೃವು ಪಠಿಸುವನು
ಎರಡನೆಯ ಖಂಡವು — ಮೈತ್ರಾವರುಣನು ಪಠಿಸುವ ವಾಲಖಿಲ್ಯಸೂಕ್ತವು
ಮೂರನೆಯ ಖಂಡವು — ಬ್ರಾಹ್ಮಣಚ್ಛಂಸಿಯೆಂಬ ಋತ್ವಿಜನು ಪಠಿಸುವ ಸುಕೀರ್ತಿ ಮತ್ತು ವೃಷಾಕಪಿ ಎಂಬ ಸೂಕ್ತಗಳು
ನಾಲ್ಕನೆಯ ಖಂಡವು — ಅಚ್ಛಾಪಾಕನೆಂಭ ಋತ್ವಿಜನು ಪಠಿಸುವ ಏವಯಾಮರುತ್ ಎಂಬ ಸೂಕ್ತವು. ಭೂಲಿಲ ಎಂಬುವನ ವೃತ್ತಾಂತವು
ಐದನೆಯ ಖಂಡವು — ಸಹಾಯಾರ್ಥವಾಗಿ ಮುಖ್ಯ ಸೂಕ್ತಗಳ ಜತೆಯಲ್ಲಿ ಪಠಿಸುವ ಇತರ ಸಹಾಯ ಸೂಕ್ತಗಳ ವಿಷಯದಲ್ಲಿ ಕೆಲವು ವಿಶೇಷ ಸಂಗತಿಗಳು ಅವುಗಳ ಅರ್ಥವಿವರಣೆ
ಆರನೆಯ ಖಂಡವು — ಅಥರ್ವವೇದದಲ್ಲಿರುವ (೨೦, ೧೨೭ – ೧೩೬) ಕುಂತಾಪಸೂಕ್ತಗಳ ಮೂಲ ಮತ್ತು ಸ್ವರೂಪ, ನಾರಾಶಂಸ, ರೈಭಿ, ಪಾರಿಕ್ಷಿತಿ, ದಿಶಾಂ ಕ್ಲೃಪ್ತಿ, ಜನಕಲ್ಪ ಎಂಬ ಮಂತ್ರಗಳು, ಇಂದ್ರಗಾಥೆಗಳು
ಏಳನೆಯ ಖಂಡವು — ಐತಾಸಪ್ರಲಾಪ, ಪ್ರವಹ್ಲಿಕ ಅಜಿಜ್ಞಾಸೇನ್ಯ, ಪ್ರತಿರಥ ಋಕ್ಕುಗಳು
ಎಂಟನೆಯ ಖಂಡವು — ಆದಿತ್ಯರು ಮತ್ತು ಅಂಗಿರಸರು ಸ್ವರ್ಗಲೋಕಪ್ರಾಪ್ತಿಗಾಗಿ ಮಾಡಿದ ಯಜ್ಞದ ಪೂರ್ವೆತಿಹಾಸವು
ಒಂಭತ್ತನೆಯ ಖಂಡವು — ಆದಿತ್ಯರು ಮತ್ತು ಅಂಗಿರಸರು ಕೊಟ್ಟ ದಕ್ಷಿಣೆಯ ವಿಷಯ ದೇವ ನೀತಸೂಕ್ತಗಳು
ಹತ್ತನೆಯ ಖಂಡವು — ದೇವನೀಥ ಮಂತ್ರಗಳ ಸ್ವರೂಪ ಮತ್ತು ಅರ್ಥವಿವರಣೆ