ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಬ್ರಹ್ಮವೈವರ್ತಮಹಾಪುರಾಣಂ – ಸಂಚಿಕೆ ೪
ಆರಂಭಿಕ ಪುಟ
ಅನುವಾದಕರು: ಶ್ರೀ ಬೆಟ್ಟದಪುರದ ಸುಬ್ರಾಯರ ಮಗ ಕೃಷ್ಣಪ್ಪ
ವಿಷಯಾನುಕ್ರಮಣಿಕೆ
೪೭ನೇ ಅಧ್ಯಾಯ —
ಸುರಭೀದೇವಿಯ ಕಥೆ.
೪೮ನೇ ಅಧ್ಯಾಯ —
ರಾಧಾದೇವಿಯ ಉಪಾಖ್ಯಾನ.
೪೯ನೇ ಅಧ್ಯಾಯ —
ರಾಧಾಸುದಾಮರಿಗೆ ಪರಸ್ಪರ ಶಾಪಬರುವಿಕೆ
೫೦ನೇ ಅಧ್ಯಾಯ —
ಸುಯಜ್ಞಮಹಾರಾಜನ ಕಥೆ. ಸುಯಜ್ಞನು ಯಾಗಮಾಡುತ್ತಿದ್ದಾಗ ಅತಿಥಿಯಾಗಿ ಬಂದ ಬ್ರಾಹ್ಮಣನನ್ನು ಅನಾದರಣಮಾಡಿದುದಕ್ಕಾಗಿ ಅವನಿಂದ ಶಾಪಹೊಂದುವಿಕೆ.
೫೧ನೇ ಅಧ್ಯಾಯ —
ಯಜ್ಞಕ್ಕಾಗಿ ಬಂದಿದ್ದ ಋಷಿಗಳು ಸುಯಜ್ಞನಿಗೆ ಪಾಪಕರ್ಮಗಳ ಸ್ವರೂಪವನ್ನೂ, ಅವುಗಳ ದುಷ್ಫಲವನ್ನೂ ವಿವರಿಸುವಿಕೆ.
೫೨ನೇ ಅಧ್ಯಾಯ —
ಕೃತಘ್ನರ ಸ್ವರೂಪ ನಿರೂಪಣೆ ಅವರುಗಳ ಪಾಪಕರ್ಮ ಮತ್ತು ಫಲಗಳ ವಿವರಣೆ.
೫೩ನೇ ಅಧ್ಯಾಯ —
ಸುಯಜ್ಞ ಮತ್ತು ಸುತಪಮಹರ್ಷಿಯ ಸಂವಾದ. ಸುತಪನು ಸುಯಜ್ಞನಿಗೆ ವಿಷ್ಣುಸ್ವರೂಪವನ್ನು ನಿರೂಪಿಸುವಿಕೆ.
೫೪ನೇ ಅಧ್ಯಾಯ —
ಗೋಲೋಕ ವರ್ಣನೆ, ನಿಖಿಲವಿಶ್ವ ವರ್ಣನೆ, ಕಾಲಮಾನ ನಿರೂಪಣೆ, ಚತುರ್ದಶಮನುಗಳ ಮತ್ತು ಸಪ್ತಚಿರಂಜೀವಿಗಳ ನಾಮ ಕಥನ, ಪ್ರಳಯವರ್ಣನೆ, ಆಗ ಪ್ರಪಂಚದ ಸ್ಥಿತಿ, ವಿಪ್ರ ಪಾದೋದಕಮಾಹಾತ್ಮ್ಯ ವರ್ಣನೆ, ಸುತಪಮಹರ್ಷಿಯು ಸುಯಜ್ಞನಿಗೆ ರಾಧಾಮಂತ್ರವನ್ನು ಉಪದೇಶಿಸಿದುದು, ಸುಯಜ್ಞನು ಗೋಲೋಕಕ್ಕೆ ಹೋಗಿ ಸೇರಿದುದು. ಗೋಲೋಕ ದರ್ಶನಕ್ಕೆ ಅರ್ಹರಾದವರ ಸ್ವರೂಪ, ಗೋಲೋಕದಲ್ಲಿ ವಿಷ್ಣುವಿನ ಸ್ವರೂಪ ನಿರೂಪಣೆ.
೫೫ನೇ ಅಧ್ಯಾಯ —
ರಾಧಾದೇವಿಯ ಪೂಜಾಪದ್ಧತಿ ನಿರೂಪಣೆ.
೫೬ನೇ ಅಧ್ಯಾಯ —
ರಾಧಾದೇವಿಯ ಕವಚನಿರೂಪಣೆ.
೫೭ನೇ ಅಧ್ಯಾಯ —
ದುರ್ಗಾದೇವಿಯ ಉಪಾಖ್ಯಾನ.
೫೮ನೇ ಅಧ್ಯಾಯ —
ಸುರಥರಾಜನ ವಂಶವರ್ಣನೆ, ಗುರುಪತ್ನಿಯಾದ ತಾರಾದೇವಿಯಲ್ಲಿ ಚಂದ್ರನಿಂದ ಬುಧನ ಉತ್ಪತ್ತಿ ವರ್ಣನೆ, ಚಂದ್ರನಿಗೆ ಕಳಂಕವು ಪ್ರಾಪ್ತವಾಗುವಿಕೆ, ಚಂದ್ರನಿಗೆ ಶುಕ್ರಾಚಾರ್ಯನ ಶಾಪ, ಪರಸ್ತ್ರಿಗಮನದಿಂದ ಪ್ರಾಪ್ತವಾಗುವ ದೋಷಗಳು, ಸ್ತ್ರೀಪುರುಷರ ಕರ್ಮವಿಶೇಷಗಳಿಂದ ಪ್ರಾಪ್ತವಾಗುವ ನರಕ ವಿಶೇಷಗಳು.
೫೯ನೇ ಅಧ್ಯಾಯ —
ತಾರಾದೇವಿಯನ್ನು ಹುಡುಕಲು ಬೃಹಸ್ಪತಿಯು ತನ್ನ ಶಿಷ್ಯರನ್ನು ಕಳುಹಿಸುವಿಕೆ, ಬೃಹಸ್ಪತಿಯ ದುಃಖ, ಇಂದ್ರ ಮತ್ತು ಬೃಹಸ್ಪತಿಯ ಸಂವಾದ.
೬೦ನೇ ಅಧ್ಯಾಯ —
ಬೃಹಸ್ಪತಿಯು ಶಂಕರನ ಮಂದಿರವಾದ ಕೈಲಾಸಕ್ಕೆ ಹೋಗುವಿಕೆ, ಶಿವನಲ್ಲಿ ಬೃಹಸ್ಪತಿಯ ವಿಜ್ಞಾಪನೆ, ಅದಕ್ಕೆ ಶಿವನ ಸಮಾಧಾನ, ದೇವತೆಗಳೆಲ್ಲರೂ ನರ್ಮದಾತೀರಕ್ಕೆ ಹೋಗುವಿಕೆ.
೬೧ನೇ ಅಧ್ಯಾಯ —
ಬ್ರಹ್ಮನು ತಾರೆಯನ್ನು ಕೊಡಿಸಲು ಮಧ್ಯಸ್ಥಿಕೆಗಾಗಿ ಶುಕ್ರಾಚಾರ್ಯನ ಮಂದಿರಕ್ಕೆ ಹೋಗುವಿಕೆ, ಬೃಹಸ್ಪತಿಗೆ ತಾರೆಯ ಪ್ರಾಪ್ತಿ, ತಾರೆಯಲ್ಲಿ ಚಂದ್ರನಿಂದ ಹುಟ್ಟಿದ ಬುಧನಿಂದ ಚಿತ್ರಾ ಎಂಬುವಳಲ್ಲಿ ಚೈತ್ರನ ಉತ್ಪಇತ್ಪಿ, ಸುರಥಮಹಾರಾಜನು ಚೈತ್ರನ ಮುಮ್ಮಗನಾಗಿ ಜನಿಸುವಿಕೆ.
೬೨ನೇ ಅಧ್ಯಾಯ —
ನಂದಿರಾಜನಿಗೆ ರಾಜ್ಯವನ್ನು ಸೋತ ಸುರಥಮಹಾರಾಜನು ಸುಮೇಧಸಮಹರ್ಷಿಯ ಆಶ್ರಮಕ್ಕೆ ಹೋದುದು, ಅಲ್ಲಿ ಪತ್ನೀಪುತ್ರರಿಂದ ಹೊರದೂಡಲ್ಪಟ್ಟು ಬಂದಿದ್ದ ಸಮಾಧಿಯೆಂಬ ವೈಶ್ಯನೊಡಗೂಡಿ ಸುಮೇಧಸನ ಸಮೀಪಕ್ಕೆ ಹೋದುದು, ಅವರಿಬ್ಬರೂ ಆ ಮಹರ್ಷಿಯೊಡನೆ ಮಾಡಿದ ಸಂಭಾಷಣೆ. ಆ ಮಹರ್ಷಿಯು ಅವರಿಬ್ಬರಿಗೂ ಉಚಿತವಾದ ಮಂತ್ರವನ್ನು ಉಪದೇಶಿಸಿದುದು.
೬೩ನೇ ಅಧ್ಯಾಯ —
ಸಮಾಧಿ ಎಂಬ ವೈಶ್ಯನು ಪ್ರಕೃತಿದೇವಿಯನ್ನು ಸ್ತುತಿಸಿದುದು. ಅನಂತರ ಅನನ್ಯಭಕ್ತಿಯಿಂದ ತಪಸ್ಸುಮಾಡಿ ಶ್ರೀಕೃಷ್ಣ ಪರಮಾತ್ಮನ ದಾಸ್ಯವನ್ನು ಪಡೆದುದು.
೬೪ನೇ ಅಧ್ಯಾಯ —
ಸುರಥಮಹಾರಾಜನು ಮಾಡಿದ ದೇವೀಪೂಜೆಯ ಕ್ರಮ.
೬೫ನೇ ಅಧ್ಯಾಯ —
ಸುರಥಮಹಾರಾಜನಿಗೆ ದಿವ್ಯಜ್ಞಾನವು ಪ್ರಾಪ್ತವಾದುದು.
೬೬ನೇ ಅಧ್ಯಾಯ —
ದುರ್ಗಾದೇವಿಯ ಸ್ತೋತ್ರ ನಿರೂಪಣೆ
೬೭ನೇ ಅಧ್ಯಾಯ —
ದುರ್ಗಾಕವಚ ನಿರೂಪಣೆ.