ಭವಿಷ್ಯಮಹಾಪುರಾಣಂ – ಭಾಗ – ೯: ಪ್ರತಿಸರ್ಗಪರ್ವ – ಚತುರ್ಥ ಖಂಡ
ಆರಂಭಿಕ ಪುಟ
ಅನುವಾದಕರು: ಶ್ರೀ ಚನ್ನಕೇಶವಯ್ಯ ಬಿ.
ವಿಷಯಾನುಕ್ರಮಣಿಕೆ
೧ನೇ ಅಧ್ಯಾಯ — ಅಗ್ನಿವಂಶದಲ್ಲಿ ಪ್ರಮರವಂಶದ ರಾಜರ ವೃತ್ತಾಂತ
೨ನೇ ಅಧ್ಯಾಯ — ತೋಮರವಂಶದ ರಾಜರ ವೃತ್ತಾಂತ
೩ನೇ ಅಧ್ಯಾಯ — ಶುಕ್ಲವಂಶದ ರಾಜರ ವೃತ್ತಾಂತ
೪ನೇ ಅಧ್ಯಾಯ — ಪರಿಹರವಂಶದ ರಾಜರ ವೃತ್ತಾಂತ
೫ನೇ ಅಧ್ಯಾಯ — ಬ್ರಹ್ಮನ ಮಧ್ಯಾಹ್ನ ಕಾಲ – ಪರಮಾತ್ಮನ ಅವತಾರಕಾರಣ
೬ನೇ ಅಧ್ಯಾಯ — ದೆಹಲಿಯಲ್ಲಿ ಮ್ಲೇಚ್ಛಭೂಪರ ಆಳ್ವಿಕೆ
೭ನೇ ಅಧ್ಯಾಯ — ಸೂರ್ಯಮಾಹಾತ್ಮ್ಯ ವರ್ಣನೆ
೮ನೇ ಅಧ್ಯಾಯ — ಆದಿತ್ಯಾವತಾರ ವರ್ಣನೆ
೯ನೇ ಅಧ್ಯಾಯ — ಆದಿತ್ಯಾವತಾರ ವರ್ಣನೆ – (ಮುಂದುವರಿದುದು)
೧೦ನೇ ಅಧ್ಯಾಯ — ಆದಿತ್ಯಾವತಾರ ವರ್ಣನೆ ಮತ್ತು ರುದ್ರರು ಅವತರಿಸಿದುದು
೧೧ನೇ ಅಧ್ಯಾಯ — ರುದ್ರಾವತಾರ ವರ್ಣನೆ – (ಮುಂದುವರಿದುದು)
೧೨ನೇ ಅಧ್ಯಾಯ — ರುದ್ರಾವತಾರ ವರ್ಣನೆ – (ಮುಂದುವರಿದುದು)
೧೩ನೇ ಅಧ್ಯಾಯ — ರುದ್ರಾವತಾರ ವರ್ಣನೆ – (ಮುಂದುವರಿದುದು)
೧೪ನೇ ಅಧ್ಯಾಯ — ರುದ್ರಾಮಾಹಾತ್ಮ್ಯ ವರ್ಣನೆ
ಕಲ್ಪಾಂತದಲ್ಲಿ ಪಂಚಭೂತಗಳ ಉತ್ಪತ್ತಿ, ಶಿವನಿಂದ ಬ್ರಹ್ಮವಿಷ್ಣುಗಳ ಸತ್ವಪರೀಕ್ಷೆ, ಲೋಕಕ್ಕೆ ತಾರಕಾಸುರನ ಬಾಧೆ, ಗೌರಿಯ ಜನನ, ಆಕೆಯ ತಪಸ್ಸು, ಶಿವನಲ್ಲಿ ದೇವತೆಗಳ ಪ್ರಾರ್ಥನೆ, ಶಿವನ ವೀರ್ಯಪ್ರದಾನಾನಂತರ ಸಮಾಧಿಯೋಗ, ಕಾಮನಿಂದ ಶಿವನ ತಪೋಭಂಗ, ಕಾಮದಹನ, ರತಿ ವಿಲಾಪ, ವರಪ್ರದಾನ, ಶಿವಗಿರಿಜೆಯರ ಕಲ್ಯಾಣ, ಗಿರಿಜಾಪತಿಯು ರುದ್ರರಿಗೆ ಅಧಿಪನಾದುದು.
೧೫ನೇ ಅಧ್ಯಾಯ — ವಸ್ವವತಾರ ವರ್ಣನೆ
೧೬ನೇ ಅಧ್ಯಾಯ — ವಸ್ವವತಾರ ವರ್ಣನೆ – (ಮುಂದುವರಿದುದು)
೧೭ನೇ ಅಧ್ಯಾಯ — ವಸುಮಹಾತ್ಮೆ – (ಮುಂದುವರಿದುದು)
೧೮ನೇ ಅಧ್ಯಾಯ — ಅಶ್ವಿನೀಕುಮಾರಾವತಾರ
೧೯ನೇ ಅಧ್ಯಾಯ — ಕೃಷ್ಣಚೈತನ್ಯ ಚರಿತ್ರ ವರ್ಣನ
೨೦ನೇ ಅಧ್ಯಾಯ — ಕೃಷ್ಣಚೈತನ್ಯ ಚರಿತ್ರ ವರ್ಣನ – ಜಗನ್ನಾಥ ಮಹಾತ್ಮ್ಯ
ಭಟ್ಟೋಜಿಯು ವಾದದಲ್ಲಿ ಜಿತನಾಗಿ ಕೃಷ್ಣಚೈತನ್ಯನಿಗೆ ಶಿಷ್ಯನಾದುದು, ವೇದಾಂಗವಾದ ವ್ಯಾಕರಣಶಾಸ್ತ್ರರಚನೆ, ವರಾಹಮಿಹಿರನೂ ಶಿಷ್ಯನಾಗಿ ವೇದಾಂಗವಾದ ಜ್ಯೋತಿಷ ಗ್ರಂಥವನ್ನು ರಚಿಸಿದುದು, ವಾಣೀಭೂಷಣನೂ ಶಿಷ್ಯನಾದುದು, ವೇದಾಂಗವಾದ ಛಂದೋಗ್ರಂಥವನ್ನು ರಚಿಸಿದುದು, ಧನ್ವಂತರಿಯು ಶಿಷ್ಯನಾದುದು, ವೇದಾಂಗವಾದ ಕಲ್ಪಶಾಸ್ತ್ರಗ್ರಂಥವನ್ನು ರಚಿಸಿದುದು, ಜಯದೇವನು ಶಿಷ್ಯನಾದುದು, ಸ್ಥೂಲಾಸ್ಥೂಲ ಸೃಷ್ಟಿಕ್ರಮ ಪರಿಜ್ಞಾನ, ಕೃಷ್ಣಚೈತನ್ಯನು ಶಿಷ್ಯಪ್ರಶಿಷ್ಯರೊಡನೆ ಜಗನ್ನಾಥ ದರ್ಶನಕ್ಕಾಗಿ ಆ ಕ್ಷೇತ್ರಕ್ಕೆ ಪ್ರಯಾಣಮಾಡುವುದು, ಸ್ವಾಮಿಯು ಮುನಿರೂಪದಲ್ಲಿ ಅಭಿಮುಖವಾಗಿ ಬಂದು ಮುಂದೆ ಒದಗುವ ವರ್ಣವಿಪರ್ಯಯವನ್ನೂ ಅದರ ನಿವಾರಣೆಗಾಗಿ ದ್ವಾದಶಾದಿತ್ಯರು ಪ್ರವೀಣಾದಿಗಳಾಗಿ ಜನಿಸುವುದನ್ನೂ ತಾನು ದಾರುರೂಪನಾಗಿ ಆ ಕ್ಷೇತ್ರದಲ್ಲಿರುತ್ತಾ ಆ ಕಾರ್ಯಕ್ಕೆ ನೆರವಾಗುವುದನ್ನೂ ಹೇಳಿ ಆ ಕ್ಷೇತ್ರಮಾಹಾತ್ಮ್ಯವನ್ನು ತಿಳಿಸಿದುದು.
೨೧ನೇ ಅಧ್ಯಾಯ — ಸ್ವಾಮಿಯಿಂದ ವರ್ಣವಿಪರ್ಯಯ ಕ್ರಮ ವಿವರಣೆ
ಕಣ್ವ ಆರ್ಯಾವತಿ ಇವರಿಂದ ದೀಕ್ಷಿತಾದಿ ದಶಪುತ್ರರ ಜನನ, ಅವರಲ್ಲಿ ಋಷಿಗಳ ಉತ್ಪತ್ತಿ, ಅವರಿಂದ ಮಿಶ್ರದೇಶದ ಮ್ಲೇಚ್ಛರಿಗೆ ಆದ ಸಂಸ್ಕಾರ, ಅವರ ತಪಸ್ಸು, ಅವರು ವರಪಡೆದು ವೈಶ್ಯರೂ, ಶೂದ್ರರೂ ಆಗಿ ಮಾರ್ಪಟ್ಟುದು, ಆಚಾರ್ಯ ಪೃಥುವಿನ ತಪಃಫಲವಾಗಿ ಅವನ ಪತ್ನಿಯಲ್ಲಿ ಮಾಗಧನ ಜನನ, ರಾಜಪುತ್ರಪುರನಿರ್ಮಾಣ, ಶೂದ್ರರ ಯಜ್ಞಾಚರಣೆ, ಇಂದ್ರನ ನಿರೋಧತಂತ್ರ, ಬೌದ್ಧರ ಏಳಿಗೆ, ಬೋಧಗಯಾದಲ್ಲಿ ಆದ ವಾದ, ಮಯನು ಗೌತಮಾಚಾರ್ಯನಾಗಿ ಸಪ್ತದ್ವೀಪಗಳಲ್ಲೂ ಯಂತ್ರಸ್ಥಾಪನೆಯ ಮೂಲಕ ಬೌದ್ಧಮತ ಪ್ರಸಾರಮಾಡಿದುದು, ನದೀಹಾಪಟ್ಟಣದಲ್ಲಿದ್ದ ಕೃಷ್ಣಚೈತನ್ಯ ಮತ್ತು ಶಾಂತಿಪುರದ ನಿತ್ಯಾನಂದ ಈ ಇಬ್ಬರನ್ನೂ ಈ ಮತವನ್ನು ತಡೆಗಟ್ಟುವ ನಿರತರಾಗಲು ನೇಮಿಸುವುದು, ಕೃಷ್ಣಚೈತನ್ಯನ ಶಿಷ್ಯರು ಬೌದ್ಧರ ಮಾಯೆಯನ್ನು ನಿರಸನಮಾಡಿದ ವೃತ್ತಾಂತ.
೨೨ನೇ ಅಧ್ಯಾಯ — ಮುಕುಲ (ಮೊಗಲ) ವಂಶದ ಉನ್ನತಿ, ಕಾಲಕ್ರಮದಲ್ಲಿ ಆ ವಂಶದ ಕ್ಷೀಣತೆ
ತಿಮಿರಲಿಂಗನ ವಂಶಜನಾದ ರೋಷಣಪುತ್ರ ಬಾಬರನು ದೆಹಲಿ ರಾಜ್ಯವನ್ನಾಕ್ರಮಿಸಿದುದು, ಅವನ ಮಗ ಹೋಮಾಯುವು ಶೇಷಶಾಕ (ಷೇರ್ಷಹ)ನಿಗೆ ಸೋತು ಕಾಡಿನಲ್ಲಿ ಅಲೆದುದು, ಅಕ್ಬರ ಮತ್ತು ಅವನ ಮಿತ್ರವರ್ಗದವರ ಪೂರ್ವಜನ್ಮವೃತ್ತಾಂತ ಅವನ ಜನನ ಕಾಲದಲ್ಲಿ ಆದ ಅಶರೀರವಾಣಿ, ಅವನ ರಾಜ್ಯಭಾರದ ವಿತರಣೆ, ಅನಂತರ ಸಲೀಮ ಖುರ್ದಕ ಅವರಂಗಾದಿಗಳ ಆಳ್ವಿಕೆಯ ಸ್ಥಿತಿ, ದಕ್ಷಿಣದೇಶದ ಸೇವಾಜಯನು(ಶಿವಾಜಿ) ಅವರಂಗನನ್ನು ನಿಗ್ರಹಿಸಿದುದು, ಮೊಗಲವಂಶದ ಕ್ಷೀಣತೆ, ಖುರಜ ದೇಶದ ನಾದರ(ಷಹ)ನ ಆಕ್ರಮಣ, ಶ್ರೀರಾಮನು ವಾನರರಿಗೆ ವರಕೊಟ್ಟಿದ್ದಪ್ರಕಾರ ಅವರ ಪುನರ್ಜನನ, ಬೌದ್ಧಧರ್ಮದ ಗುರುಂಡರು ವ್ಯಾಪಾರಕ್ಕಾಗಿ ಆರ್ಯದೇಶಕ್ಕೆ ಬಂದುದು, ಕಲ್ಕತ್ತಾನಗರ ನಿರ್ಮಾಣ, ಪುಲೋಮಾರ್ಚಿಯ ಆಳ್ವಿಕೆ, ಯಜ್ಞಾಂಶನಶಾಪ, ಗುರುಂಡರಾಜ್ಯ ಸಮಾಪ್ತಿ, ಮೌನವಂಶದ ಅರ್ಚಿಕ ಮತ್ತು ದೇವಕರ್ಣ ಇವರ ಆಳ್ವಿಕೆ, ನಾಗವಂಶದವರಿಂದ ಇವರ ಪರಾಜಯ.
೨೩ನೇ ಅಧ್ಯಾಯ — ನಾಗ ಸಂತತಿ
ವಿಕ್ರಮಶಕ ೨೨ನೇ ಶತಮಾನದಲ್ಲಿ ಕಿಲ್ಕಿಲಾದಲ್ಲಿ ಭೂತನಂದಿ, ಶಿಶುನಂದಿ ಇವರ ವಂಶೋತ್ಪತ್ತಿ, ಇವರ ಯಜ್ಞನಿರೋಧ, ನಾಗಾರಾಧನಾನಿರತತೆ, ಇವನ ಶೌರ್ಯಕ್ಕೆ ಮೆಚ್ಚಿ ರೋಮ್ ರಾಜನು ತನ್ನ ಕನ್ಯೆಯನ್ನು ಕೊಟ್ಟುದು, ಆಕೆಯಲ್ಲಿ ಬಾಹ್ಲಿಕನ ಜನನ, ಅವನ ಕಾಲದಲ್ಲಿ ಪಿತೃತರ್ಪಣಾದಿ ಕರ್ಮವಿಹೀನತೆ, ಸನಾತನ ಧರ್ಮೋದ್ಧಾರಕ್ಕಾಗಿ ಪುಷ್ಯಮಿತ್ರನ ಉತ್ಪತ್ತಿ, ವಿಪ್ರರೂಪಿನ ಕಲಿಯು ಪುಷ್ಯಮಿತ್ರನನ್ನು ಪರೀಕ್ಷಿಸಿ ಸೋತುದು, ಕೋಸಲದಲ್ಲಿ ರಾಕ್ಷಸಾರಿರಾಜನ ಖ್ಯಾತಿ, ಬೈದರದೇಶದ ವಿಶಾರದ ರಾಜನ ದಂಡಯಾತ್ರೆ, ನೈಷಧದಲ್ಲಿ ಕಾಲಾಮಾಲಿರಾಜನ ಆಳ್ವಿಕೆಯಲ್ಲಿ ಪ್ರೇತಪೂಜೆಯ ರೂಢಿ, ಆಚಾರವಿಹೀನತೆ, ಮಗಧರಾಜನಾದ ವಿಶ್ವಸ್ಪೂರ್ಜಿಯ ಕಾಲದಲ್ಲಿ ಜನರ ಅತ್ಯಾಚಾರಕರ್ಮ, ಇದಕ್ಕಾಗಿ ಯಜ್ಞಾಂಶನು ತನ್ನ ಅಂಶದಿಂದ ಗುರ್ಜರದೇಶದ ಸೋಮನಾಥ ರಾಜನಾಗಿ ಜನಿಸಿದುದು.
೨೪ನೇ ಅಧ್ಯಾಯ — ಕಲಿಯುಗ ಪಾದಗಳ ಕಾಲಸ್ಥಿತಿ
ದೈತ್ಯರು ಹರಿಖಂಡಕ್ಕೆ ಹೋದುದು, ಅಲ್ಲಿನವರು ಇಂದ್ರನಲ್ಲಿ ದೂರು ಹೇಳುವುದು, ಇಂದ್ರಾಜ್ಞೆಯಂತೆ ವಿಶ್ವಕರ್ಮನು ಅನ್ಯಖಂಡಮಾರ್ಗ ನಿರೋಧ ಯಂತ್ರವನ್ನು ರಚಿಸಿದ್ದು, ಬಲಿಯು ವಾಮನನಲ್ಲಿ ಭೂಲೋಕದವರ ಸೌಖ್ಯಾತಿಶಯವನ್ನು ತಿಳಿಸಿದುದು, ವಾಮನನು ತನ್ನ ೨ ಅಂಶದಿಂದ ಜನಿಸಲು ಸಂಕಲ್ಪಿಸಿ ಸ್ತ್ರೀಯರ ದುರ್ನಡತೆಯ ವರ್ಣಸಂಕರ ಕಾರಣವೆಂದರಿತು ಒಂದು ಅಂಶದವನು ಸ್ತ್ರೀಯರನ್ನೆಲ್ಲಾ ಉಪಭೋಗಿಸಿ ನೀತಿಭ್ರಷ್ಠೆಯರನ್ನಾಗಿ ಮಾಡಿದುದು, ವರ್ಣಸಂಕರದ ವ್ಯಕ್ತಿಗಳ ಉತ್ಪತ್ತಿ, ಕಲಿಯುಗದ ಎರಡನೆಯ ಪಾದದಲ್ಲಿ ಎರಡುಮೊಳದ ಮನುಷ್ಯರ ಜನನ, ಅವನ ನಡತೆ, ಆಯಸ್ಸು, ವಾಮನಾಂಶ ಸಂಭೂತರಾದ ರಾಜರ ವೃತ್ತಾಂತ, ಕೃಷ್ಣಚೈತನ್ಯನ ದೇವಾಂಶ ಸಂಜಾತರೊಡನೆ, ಇಂದ್ರಲೋಕಕ್ಕೆ ಹೋದುದು, ಕಲಿಯುಗ ಮೂರನೆಯ ಪಾದದಲ್ಲಿ ಜೀವಿಗಳ ಸ್ಥಿತಿಗತಿಗಳು, ನರಕದಲ್ಲಿ ಜನಪೂರ್ಣತೆ.
೨೫ನೇ ಅಧ್ಯಾಯ — ಕಲಿಯುಗದ ಚತುರ್ಥಪಾದ ಸ್ವರೂಪ
೨೬ನೇ ಅಧ್ಯಾಯ — ಕಲ್ಕಿ ವಿಜಯ ವೃತ್ತಾಂತ