ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀದೇವೀಭಾಗವತಂ ಮಹಾಪುರಾಣಂ – ೧೨ನೆಯ ಸ್ಕಂಧ
ಆರಂಭಿಕ ಪುಟ
ಅನುವಾದಕರು: ಶ್ರೀ ಎಡತೊರೆ ಚಂದ್ರಶೇಖರ ಶಾಸ್ತ್ರೀ
ವಿಷಯಾನುಕ್ರಮಣಿಕೆ
ಮುನ್ನುಡಿ
೧ನೆಯ ಅಧ್ಯಾಯ
ಗಾಯತ್ತ್ರೀ ಜಪೋಪಾಸನೆಯು ಎಲ್ಲ ಸಿದ್ಧಿಗೂ ಮೂಲವು; ಗಾಯತ್ತ್ರೀ ಮಂತ್ರವರ್ಣಗಳಿಗೆ ಋಷಿದೇವತಾ ಛಂದಸ್ಸುಗಳು; ಇದರ ತಿಳಿವಳಿಕೆಯ ಫಲಶ್ರುತಿ
೨ನೆಯ ಅಧ್ಯಾಯ
ಗಾಯತ್ತ್ರೀ ಮಂತ್ರವರ್ಣಗಳಿಗೆ ಬಣ್ಣಗಳೂ ಮತ್ತು ತತ್ವಗಳು ಉಪಾಸನೆಯ ಸೌಕರ್ಯಕ್ಕಾಗಿವೆ
೩ನೆಯ ಅಧ್ಯಾಯ
ಗಾಯತ್ತ್ರೀ ಕವಚ, ಧ್ಯಾನ, ಅಸ್ತ್ರಗಳ ವಿವರಗಳು
೪ನೆಯ ಅಧ್ಯಾಯ
ಗಾಯತ್ತ್ರೀ ಮಂತ್ರ ಜಪ ಉಪಾಸನೆಗಳಿಂದ ಉಪಾಸ್ಯದೇವಿಯ ತನ್ಮಯತ್ವಪ್ರಾಪ್ತಿ; ಗಾಯತ್ತ್ರೀ ಹೃದಯದ ಜಪ ಫಲಗಳು
೫ನೆಯ ಅಧ್ಯಾಯ
ಮೂರು ಸಂಧ್ಯಾಕಾಲದಲ್ಲಿ ಗಾಯತ್ತ್ರಿಯ ಸ್ವರೂಪ ವಿಶೇಷಗಳ ವಿವರಗಳು. ಕಾಲಭೇದದಿಂದ ನಾಮರೂಪಭೇದಗಳು; ಸ್ತೋತ್ರಪಠನಫಲ
೬ನೆಯ ಅಧ್ಯಾಯ
ಗಾಯತ್ತ್ರೀ ಸಹಸ್ರನಾಮದ ಉಪದೇಶ ಪ್ರಾರ್ಥನೆ; ವರ್ಣಮಾಲಾನುಕ್ರಮದಲ್ಲಿ ಗಾಯತ್ತ್ರೀ ನಾಮಗಳ ಉಪದೇಶ; ಗಾಯತ್ತ್ರಿಯು ಯದುವಂಶಸಮುದ್ಭವಳೂ ಆಗಿದ್ದಾಳೆ; ಗಾಯತ್ತ್ರೀ, ಸಾವಿತ್ರೀ, ಸರಸ್ವತಿಯರು ಆಭಿನ್ನರು; ಸಹಸ್ರನಾಮ ಪಠನಕಾಲ ಮತ್ತು ಅಧಿಕಾರಿಗಳು; ಸಹಸ್ರನಾಮ ಜಪ ಹೋಮ ಫಲಶ್ರುತಿ
೭ನೆಯ ಅಧ್ಯಾಯ
ಗಾಯತ್ತ್ರೀ ದೀಕ್ಷಾಸ್ವರೂಪ ವಿವರಣೆ; ದೀಕ್ಷಾ ಪದಾರ್ಥ; ಜಪವಿಘ್ನ ನಿವಾರಣೆಯ ಪರೀಕ್ಷೆ; ದೀಕ್ಷಾದಾನ ಗ್ರಹಣಗಳಿಗೆ ಪೂರ್ವಸಿದ್ಧತೆಗಳು; ಮಂತ್ರೋಪದೇಶಕ್ಕೆ ಸಂಬಂಧಿಸಿದ ಅಂಗನ್ಯಾಸ; ದೇವಮಂತ್ರದ ದೇವತಾಧ್ಯಾನಕ್ರಮ; ಅರ್ಘ್ಯಪಾತ್ರಸ್ಥಾಪನ ಕ್ರಮ; ಜಲಕುಂಭಸ್ಥಾಪನ ಮತ್ತು ಪೂಜೆ; ದೇವಿಯ ಅಂಗಗಳಲ್ಲಿ ಮಾತೃಕಾನ್ಯಾಸ ಕ್ರಮ; ಕುಂಡ, ಅಧಿವಾಸ, ಸ್ಥಂಡಿಲಗಳ ಸಂಸ್ಕಾರ ಕ್ರಮ; ಪೀಠಪೂಜಾ, ದೇವತಾಧ್ಯಾನ, ಅಗ್ನಿಸ್ಥಾಪನ; ವಹ್ನಿ ಯಂತ್ರ ರಚನಾ, ಧ್ಯಾನ, ಪೂಜಾ; ಗರ್ಭಾಧಾನಾದಿ ಸಂಸ್ಕಾರಗಳು; ಮಹಾ ಗಣಪತಿ ಮಂತ್ರದಿಂದ ಹೋಮ ಕ್ರಮ; ಉಪಾಸಕನು ತನಗೂ ಮಂತ್ರದೇವತೆಗೂ ಅಭೇದ ಭಾವನೆಯನ್ನು ಮಾಡುತ್ತಿರಬೇಕು; ತಾರ, ಹೃಲ್ಲೇಖಾ ಮುಂತಾದ ಏಕಾಕ್ಷರ ಮಂತ್ರಗಳಿಂದ ಶಕ್ತ್ಯುಪಾಸನೆಯು ಮುಖ್ಯವಾದುದು; ಗುರುವು ಶಿಷ್ಯನನ್ನು ಶೋಧಿಸುವ ಬಗೆ; ಷಡಂಗನ್ಯಾಸವಾದ ಮೇಲೆ ದೇವತಾಯೋಜನೆ; ಹೀಗೆ ಉಪಾಸನೆಯು ಗುರುಶಿಷ್ಯರಿಬ್ಬರಿಗೂ ಶ್ರೇಯಸ್ಕರವು; ಶಕ್ತಿಯು ಗಾಯತ್ತ್ರೀ ಸ್ವರೂಪಳು
೮ನೆಯ ಅಧ್ಯಾಯ
ಗಾಯತ್ತ್ರೀ ದೇವಿಯ ಉಪಾಸನೆಯನ್ನು ಎಲ್ಲರೂ ಏಕೆ ಮಾಡರು? ಕೇನೋಪನಿಷತ್ತಿನ ಕಥೆ; ಎಲ್ಲರ ಜಯಕ್ಕೂ ಶಕ್ತಿದೇವಿಯ ಬೆಂಬಲವೇ ಕಾರಣವು; ಇಂದ್ರ, ಅಗ್ನಿ. ವಾಯು ಮುಂತಾದ ದೇವತೆಗಳ ಮುಖಂಡರ ಅಹಂಕಾರ; ಅಹಂಕಾರದಿಂದ ಆಜ್ಞಾನವೂ ಅವಮಾನವೂ ತಪ್ಪವು; ಅಧಿಕಾರ, ಜಯ, ಅಜ್ಞಾನಗಳು ಅಹಂಕಾರಕ್ಕೆ ಮೂಲ ಕಾರಣಗಳು; ಒಳ್ಳೆಯ ಸಂಸ್ಕೃತಿಯುಳ್ಳವರಿಗೆ ಅಹಂಕಾರ ಖಂಡನೆಯಿಂದ ಭಕ್ತಿಯು ಪುಣ್ಯಫಲವಾಗಿ ಉಂಟಾಗುತ್ತದೆ; ಮಾಯೆಯ ಸಗುಣ ನಿರ್ಗುಣ ರೂಪಗಳು; ದೇವಿಯ ಸಗುಣ ನಿರ್ಗುಣ ರೂಪಗಳು; ಉಮಾದೇವಿಯ ಆವಿರ್ಭಾವ; ಇಂದ್ರಾದಿಗಳಿಗೆ ದೇವಿಯ ಬುದ್ಧಿವಾದ ಮತ್ತು ಉಪದೇಶ; ಗಾಯತ್ತ್ರ್ಯುಪಾಸನೆಯೇ ಎಲ್ಲರಿಗೂ ನಿತ್ಯವಾದುದು ಮತ್ತು ಎಲ್ಲ ಶ್ರೇಯಸ್ಸುಗಳಿಗೂ ಸಾಧನವಾದುದು
೯ನೆಯ ಅಧ್ಯಾಯ
ದ್ವಾದಶವರ್ಷಗಳ ಬರಗಾಲದಲ್ಲಿ ಬ್ರಾಹ್ಮಣರು ಗೌತಮಾಶ್ರಮದಲ್ಲಿ ಆಶ್ರಯವನ್ನು ಪಡೆದರು; ಗಾಯತ್ರೀ ಉಪಾಸಕನಾದ ಗೌತಮನ ಪ್ರಭಾವ; ಪೂರ್ಣಪಾತ್ರವನ್ನು ಗಾಯತ್ತ್ರಿಯು ಅನುಗ್ರಹಿಸಿದಳು; ಅದರಿಂದ ಎಲ್ಲರ ಇಷ್ಟಾರ್ಥಗಳ ಲಾಭವು; ಗೌತಮನು ಗಾಯತ್ರೀದೇವಿಗೆ ಒಂದು ದೇವಾಲಯವನ್ನೂ ಕಟ್ಟಿಸಿದನು; ದೇವಸಭೆಯಲ್ಲಿ ಗೌತಮನ ಗುಣಾಭಿನಂದನವನ್ನು ಇಂದ್ರನೂ ಮಾಡಿದನು; ನಾರದನು ಬಂದು ಆ ವಿಷಯವನ್ನು ಸಭೆಯಲ್ಲಿ ತಿಳಿಸಿದನು; ಸುಖಾತಿಶಯದಿಂದ ದುಃಖವನ್ನು ಮರೆತಿದ್ದ ಬ್ರಾಹ್ಮಣರಿಗೆ ಅಸೂಯೆಯುಂಟಾಯಿತು; ಪುಣ್ಯಕರ್ಮ ಫಲವು ಮುಗಿಯಲು ದುರ್ಬುದ್ಧಿಯುಂಟಾಗುತ್ತದೆ; ಕೃತಘ್ನರಾದ ಬ್ರಾಹ್ಮಣರಿಗೆ ಗೌತಮರ ಶಾಪ; ಪಶ್ಚಾತ್ತಾಪದೊಡನೆ ಪ್ರಾರ್ಥಿಸಲು ವಿಶಾಪದಕಾಲವನ್ನೂ ತಿಳಿಸಿದುದು; ಗಾಯತ್ತ್ರೀ ಉಪಾಸನೆಯೇ ಎಲ್ಲ ಶ್ರೇಯಸ್ಸಿಗೂ ಕಾರಣವು
೧೦ನೆಯ ಅಧ್ಯಾಯ
ಸರ್ವಲೋಕದಲ್ಲಿ, ಮಣಿದ್ವೀಪದಲ್ಲಿ, ಚಿಂತಾಮಣಿ ಗೃಹವು ದೇವಿಯ ಆವಾಸಸ್ಥಾನವು ಹದಿನೆಂಟು ಕೋಟೆಗಳು, ಉದ್ಯಾನಗಳು, ದಿಕ್ಪಾಲಕರು, ಶಕ್ತಿದೇವಿಯರು, ತ್ರಿಮೂರ್ತಿಗಳು, ಮಂತ್ರಿಣೀದೇವಿಯರು;
೧೧ನೆಯ ಅಧ್ಯಾಯ
ದೇವಿಯ ಅಂತರಂಗ ಸೇವಕಿಯರು; ಅಷ್ಟಮಾತೃಕೆಯರು; ಇವರೆಲ್ಲರೂ ಶ್ರೀಚಕ್ರದಲ್ಲೂ ಆಯಾ ಸ್ಥಾನಗಳಲ್ಲಿ ಭಾವಿಸಲ್ಪಡಬೇಕು
೧೨ನೆಯ ಅಧ್ಯಾಯ
ಭುವನೇಶ್ವರೀ ದೇವಿಯು ಅರಮನೆಯ ಮಂಟಪಗಳಲ್ಲಿ ನೆರವೇರಿಸುತ್ತಿರುವ ಅನುಗ್ರಹ ಕಾರ್ಯಗಳು; ಸೃಷ್ಟ್ಯಾದಿಯಲ್ಲಿ ಅರ್ಧನಾರೀಶ್ವರ ಸ್ವರೂಪದ ಆವಿರ್ಭಾವ; ಭುವನೇಶ್ವರೀ ಸ್ವರೂಪವರ್ಣನೆ; ಚಿಂತಾಮಣಿಗೃಹ, ಅಲ್ಲಿ ಭಕ್ತರ ಭೋಗಕ್ರಮ
೧೩ನೆಯ ಅಧ್ಯಾಯ
ಜನಮೇಜಯರಾಜನಿಗೆ ವ್ಯಾಸನು ದೇವೀ ಪ್ರಣವಮಂತ್ರವನ್ನು ಉಪದೇಶಿಸಿದನು; ಅದರ ಫಲವಾಗಿ ಅವನ ತಂದೆಗೂ ದುರ್ಗತಿಯು ತಪ್ಪಿ ಸದ್ಗತಿ ಪ್ರಾಪ್ತಿಯು; ವ್ಯಾಸನ ಬುದ್ಧಿವಾದ; ಈ ಮಹಾಪುರಾಣದ ಹೆಚ್ಚುಗಾರಿಕೆ
೧೪ನೆಯ ಅಧ್ಯಾಯ
ಈ ದೇವೀಭಾಗವತಮಹಾಪುರಾಣದ ಪಠನ, ಶ್ರವಣಗಳಿಗಾಗಿ ಮಾಡಬೇಕಾದ ಶಾಂತಿಕರ್ಮ ವಿಧಾನ; ಈ ಪುರಾಣ ಶ್ರವಣದ ಫಲಶ್ರುತಿ