ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀದೇವೀಭಾಗವತಂ ಮಹಾಪುರಾಣಂ – ೧ ಮತ್ತು ೨ನೆಯ ಸ್ಕಂಧಗಳು
ಆರಂಭಿಕ ಪುಟ
ಅನುವಾದಕರು: ಶ್ರೀ ಎಡತೊರೆ ಚಂದ್ರಶೇಖರ ಶಾಸ್ತ್ರೀ
ವಿಷಯಾನುಕ್ರಮಣಿಕೆ
ಮುನ್ನುಡಿ
ಪ್ರಥಮ ಸ್ಕಂಧ
೧ನೆಯ ಅಧ್ಯಾಯ
ಶೌನಕಾದಿಋಷಿಗಳು ಸೂತಪೌರಾಣಿಕರನ್ನು ಪುರಾಣಗಳ ವಿಷಯವಾಗಿ ಪ್ರಶ್ನೆಮಾಡಿದುದು. ಪುರಾಣಗಳು ಮೂರುಬಗೆ
೨ನೆಯ ಅಧ್ಯಾಯ
ದೇವೀಭಾಗವತದ ಒಟ್ಟು ಶ್ಲೋಕಸಂಖ್ಯೆ ಮತ್ತು ವಿಷಯಗಳು; ಸೂತನು ದೇವಿಯನ್ನು ಸ್ತೋತ್ರಮಾಡಿದುದು. ನೈಮಿಶಾರಣ್ಯಪದದ ಅರ್ಥವಿವರಣೆ
೩ನೆಯ ಅಧ್ಯಾಯ
ಹದಿನೆಂಟು ಮಹಾಪುರಾಣಗಳು, ಉಪಪುರಾಣಗಳು, ಅವುಗಳ ಗ್ರಂಥಸಂಖ್ಯೆಯು ಮತ್ತು ಆಯಾಯ ಯುಗಗಳಿಗೆ ಸಂಬಂಧಿಸಿದ ವ್ಯಾಸರ ಹೆಸರುಗಳು; ಜನಸಾಮಾನ್ಯದ ತಿಳಿವಳಿಕೆಗಾಗಿ ಪುರಾಣಗಳ ರಚನೆ
೪ನೆಯ ಅಧ್ಯಾಯ
ದೇವೀಸರ್ವೋತ್ತಮತ್ವವಿಷಯವು. ಬ್ರಹ್ಮ, ವಿಷ್ಣು, ರುದ್ರ, ಇವರೆಲ್ಲರೂ ದೇವಿಗೆ ಅಧೀನರು ಮತ್ತು ಪ್ರಾಸಂಗಿಕವಾಗಿ ಮಗನಿಗಾಗಿ ವ್ಯಾಸನು ತಪಸ್ಸನ್ನು ಮಾಡುದುದು. ಶುಕಮುನಿಯ ಉತ್ಪತ್ತಿಯ ಕಥೆಯ ಪ್ರಶ್ನೆ. ಹಯಗ್ರೀವನೆಂಬ ರಾಕ್ಷಸನ ಸಂಹಾರಕ್ಕಾಗಿ ವಿಷ್ಣುವಿನ ಹಯಗ್ರೀವಾವತಾರದ ಕಥೆ. ವಿಷ್ಣುವಿಗೆ ಲಕ್ಷ್ಮಿಯ ಶಾಪ
೫ನೆಯ ಅಧ್ಯಾಯ
ಮಹಾದೇವಿಯ ಸರ್ವೋತ್ಕೃಷ್ಟತ್ವವು. ವೇದಗಳು ದೇವಿಯನ್ನು ಸ್ತೋತ್ರಮಾಡಿದುದು
೬ನೆಯ ಅಧ್ಯಾಯ
ಪುರಾಣಶ್ರವಣದಲ್ಲಿನ ಮಾಹಾತ್ಮ್ಯ, ಮತ್ತು ಅದರ ಮುರು ಬಗೆ. ಮಧುಕೈಟಭರ ಕಥೆ, ಅವರ ತಪಸ್ಸು
೭ನೆಯ ಅಧ್ಯಾಯ
ತನ್ನನ್ನು ಕೊಲ್ಲಲು ಬಂದ ಮಧುಕೈಟಭರಿಗೆ ಭಯಪಟ್ಟು ಬ್ರಹ್ಮನು, ವಿಷ್ಣುವು ನಿದ್ರೆಗೆ ಅಧೀನನಾಗಿದ್ದುದನ್ನು ನೋಡಿ ಯೋಗನಿದ್ರಾರೂಪಳಾದ ಮಹಾದೇವಿಯನ್ನು ಸ್ತೋತ್ರ ಮಾಡಿದುದು. ದೇವಿಯ ಅನುಗ್ರಹದಿಂದ ವಿಷ್ಣುವು ಎದ್ದುದು
೮ನೆಯ ಅಧ್ಯಾಯ
ಆರಾಧನೆಯಮಾಡಲು ಯೋಗ್ಯರಾದ ದೇವತೆಗಳಲ್ಲಿ ಸರ್ವಶಕ್ತಿ ಸ್ವರೂಪಳೂ, ಸರ್ವತೇಜೋಮಯಳೂ ಆದ ಆದಿಶಕ್ತಿಯೇ ಸರ್ವೋತ್ತಮವಾದ ಆರಾಧ್ಯದೇವಿಯೆಂಬ ವಿಷಯವು. ವಿಷ್ಣುವೂ, ಬ್ರಹ್ಮನೂ, ನಾರದನೂ, ವ್ಯಾಸನೂ ಆದಿಶಕ್ತಿ ಸ್ವರೂಪವನ್ನು ಪ್ರಚಾರಪಡಿಸಿದುದು
೯ನೆಯ ಅಧ್ಯಾಯ
ದೇವೀಪ್ರಸಾದದಿಂದ ಎಚ್ಚರಗೊಂಡ ವಿಷ್ಣುವು ಮಧುಕೈಟಭರೊಡನೆ ಯುದ್ಧಮಾಡಿ ಬಳಲಿದುದು. ದೇವಿಯನ್ನು ಸ್ತೋತ್ರಮಾಡಿ ಯುಕ್ತಿಯಿಂದ ಮಧುಕೈಟಭರನ್ನು ಸಂಹಾರಮಾಡುವುದು
೧೦ನೆಯ ಅಧ್ಯಾಯ
ಈಶ್ವರನು ವ್ಯಾಸನಿಗೆ ಮಕ್ಕಳಾಗಲೆಂದು ವರವನ್ನು ಕೊಡುವುದು. ಅಪ್ಸರಸ್ತ್ರೀಯು ತನಗೆ ಧರ್ಮಪತ್ನಿಯಾಗಿರಲಾರಳೆಂದು ವ್ಯಾಸನ ಆತಂಕ
೧೧ನೆಯ ಅಧ್ಯಾಯ
ಊರ್ವಶೀಪುರೂರವರ ಪ್ರಣಯಕಥೆ. ಚಂದ್ರತಾರೆ ಇವರ ಪ್ರೇಮಸಮಾಗಮ. ಬುಧನ ಉತ್ಪತ್ತಿಯು. ಮಗನಿಗಾಗಿ ಗುರುಚಂದ್ರರಯುದ್ಧ. ಬ್ರಹ್ಮನು ಸಮಾಧಾನಪಡಿಸಿದುದು
೧೨ನೆಯ ಅಧ್ಯಾಯ
ಸುದ್ಯುಮ್ನರಾಜನ ಕಥೆ, ಅವನು ಹೆಂಗಸಾದುದು, ಅವನ ದೇವೀಸ್ತೋತ್ರ, ಪುರೂರವನ ಉತ್ಪತ್ತಿ
೧೩ನೆಯ ಅಧ್ಯಾಯ
ಪುರೂರವ ಮತ್ತು ಊರ್ವಶಿಯರ ವೃತ್ತಾಂತವು
೧೪ನೆಯ ಅಧ್ಯಾಯ
ಧರ್ಮಪತ್ನಿಯನ್ನು ಆಶಿಸಿದ ವ್ಯಾಸನು ಘೃತಾಚಿಯನ್ನು ಸ್ವೀಕರಿಸದಿರಲು ಅವಳು ಗಿಣಿಯಾದುದು. ಶುಕಮುನಿಯು ಅರಣಿಯಿಂದ ಹುಟ್ಟಿದುದು. ವ್ಯಾಸನು ಶುಕನನ್ನು ಗೃಹಸ್ಥಾಶ್ರಮವನ್ನು ಸ್ವೀಕರಿಸೆಂದು ಕೇಳಿದುದು
೧೫ನೆಯ ಅಧ್ಯಾಯ
ಶುಕಮುನಿಗೆ ಸಂಸಾರದಲ್ಲಿ ವೈರಾಗ್ಯವು ವ್ಯಾಸಶುಕರಿಗೆ ಧರ್ಮದ ವಿಷಯದಲ್ಲಿ ಚರ್ಚೆ. ಶುಕನಿಗೆ ವ್ಯಾಸನ ಉಪದೇಶವು ಫಲಕಾರಿಯಾಗದೇಹೋದುದು
೧೬ನೆಯ ಅಧ್ಯಾಯ
ಶುಕನಿಗೆ ಈ ದೇವೀಭಾಗವತವನ್ನು ವ್ಯಾಸಋಷಿಯು ಉಪದೇಶಿಸುವುದು
೧೭ನೆಯ ಅಧ್ಯಾಯ
ಜನಕಮಹಾರಾಜನನ್ನು ನೋಡಲು ಶುಕಮುನಿಯು ಮಿಥಿಲಾನಗರಕ್ಕೆ ಹೋಗುವುದು
೧೮ನೆಯ ಅಧ್ಯಾಯ
ಶುಕಮುನಿಗೆ ಜನಕರಾಜನು ತತ್ತ್ವೋಪದೇಶಮಾಡುವುದು
೧೯ನೆಯ ಅಧ್ಯಾಯ
ಶುಕಮುನಿಯು ಜನಕನನ್ನು ಪುನಃ ಪ್ರಶ್ನಿಸಿದುದು. ಮುಕ್ತಿಯೂ, ಸಂಸಾರವೂ, ಆಡಳಿತವೂ ಪರಸ್ಪರ ವಿರೋಧಿಗಳು. ಈ ವಿಷಯದಲ್ಲಿ ಜನಕನ ಪ್ರತ್ಯುತ್ತರ. ಶುಕನು ಮನಸ್ಸಮಾಧಾನವನ್ನು ಪಡೆದು ವ್ಯಾಸನ ಸಮಿಪಕ್ಕೆ ಹಿಂತಿರುಗುವುದು. ಶುಕನು ಗೃಹಸ್ಥನಾಗಿ ಕೆಲವು ಕಾಲವಿದ್ದು ಕಡೆಗೆ ಮುಕ್ತಿಯನ್ನೇ ಪಡೆದುದು
೨೦ನೆಯ ಅಧ್ಯಾಯ
ಆ ಮೇಲೆ ವ್ಯಾಸಮುನಿಯು ಆಚರಿಸಿದ ಕಾರ್ಯಗಳು
ದ್ವಿತೀಯ ಸ್ಕಂಧ
೧ನೆಯ ಅಧ್ಯಾಯ
ವ್ಯಾಸಋಷಿಯ ಜನನಿಯಾದ ಸತ್ಯವತಿಯ ಮತ್ತು ಉಪರಿಚರವಸು, ಮತ್ಸ್ಯರಾಜ, ಮತ್ಸ್ಯಗಂಧೆ ಇವರ ಜನ್ಮವೃತ್ತಾಂತವು
೨ನೆಯ ಅಧ್ಯಾಯ
ಪರಾಶರಮಹರ್ಷಿಯಿಂದ ದಾಶಕನ್ಯೆಯಾದ ಸತ್ಯವತಿಯಲ್ಲಿ ವ್ಯಾಸಮುನಿಯ ಜನನ ವಿಚಾರವು
೩ನೆಯ ಅಧ್ಯಾಯ
ಮಹಾಭಿಷರಾಜನಿಗೆ ಬ್ರಹ್ಮನಿಂದ ಶಾಪಬಂದ ಕಥೆ; ಶಂತನುರಾಜನು ಗಂಗಾದೇವಿಯಲ್ಲಿ ಭೀಷ್ಮನನ್ನೂ, ಸತ್ಯವತಿಯಲ್ಲಿ ವಿಚಿತ್ರವೀರ್ಯ, ಚಿತ್ರಾಂಗದ ಇವರನ್ನೂ ಪಡೆಯುವುದು
೪ನೆಯ ಅಧ್ಯಾಯ
ಅಷ್ಟವಸುಗಳಿಗೆ ವಸಿಷ್ಠಋಷಿಯಿಂದ ಶಾಪಬಂದ ವೃತ್ತಾಂತವು ಮತ್ತು ಭೂಲೋಕದಲ್ಲಿ ಅವರ ಜನನ ವಿಚಾರವು
೫ನೆಯ ಅಧ್ಯಾಯ
ಶಂತನುರಾಜನು ದಾಶಕನ್ಯೆಯಾದ ಸತ್ಯವತಿಯನ್ನು ಮದುವೆಯಾದ ವೃತ್ತಾಂತದ ವಿವರವು; ಬೆಸ್ತರವನ ಬೇಡಿಕೆ, ಭೀಷ್ಮನ ವಾಗ್ದಾನ
೬ನೆಯ ಅಧ್ಯಾಯ
ವ್ಯಾಸಮುನಿಯಿಂದ ಕುರುವಂಶೋದ್ಧಾರಕ್ಕಾಗಿ ಧೃತರಾಷ್ಟ್ರ, ಪಾಂಡು, ವಿದುರ ಎಂಬ ಮೂರು ಮಕ್ಕಳ ಉತ್ಪತ್ತಿಯು ಮತ್ತು ಪಾಂಡವರ ಉತ್ಪತ್ತಿ ವಿಚಾರವು
೭ನೆಯ ಅಧ್ಯಾಯ
ಪಾಂಡವರ ಕಥಾವೃತ್ತಾಂತವು ಮತ್ತು ದೇವೀಪ್ರಭಾವದಿಂದ ಮೃತರಾಗಿದ್ದ ಕರ್ಣಾದಿಗಳ ಪುನರ್ದರ್ಶನವು
೮ನೆಯ ಅಧ್ಯಾಯ
ಪಾಂಡವರ ನಿರ್ಯಾಣವು ಮತ್ತು ಉತ್ತರಾದೇವಿಯ ಪುತ್ರನಾದ ಪರೀಕ್ಷಿದ್ರಾಜನು ದೊರೆಯಾದುದು. ಅವನಿಗೆ ಸರ್ಪದಂಶನದಿಂದ ಮರಣವಾಗುವಂತೆ ಶಾಪಬಂದ ಸಂಗತಿಯು, ಮೇನಕೆಯಲ್ಲಿ ಪ್ರಮದ್ವತಿಯ ಜನನ ವಿಚಾರವು
೯ನೆಯ ಅಧ್ಯಾಯ
ರುರುಮುನಿಯು ಪ್ರಮದ್ವತಿಯನ್ನು ಮದುವೆಯಾದ ವಿಚಾರವು ಮತ್ತು ಪರೀಕ್ಷಿದ್ರಾಜನು ಶಾಪಭಯದಿಂದ ರಕ್ಷಣೆಗಾಗಿ ಗುಪ್ತವಾದ ಉಪ್ಪರಿಗೆಯಲ್ಲಿ ಇರುವುದು
೧೦ನೆಯ ಅಧ್ಯಾಯ
ತಕ್ಷಕ ಮತ್ತು ಕಶ್ಯಪನೆಂಬ ಬ್ರಾಹ್ಮಣ ಇವರುಗಳ ಸಮಾಗಮ ಮತ್ತು ಸಂಭಾಷಣೆ, ಕಶ್ಯಪನ ಮಂತ್ರ ಸಾಮರ್ಥ್ಯ ಪ್ರದರ್ಶನ, ತಕ್ಷಕನು ಅವನನ್ನು ದ್ರವ್ಯದಾನದಿಂದ ಹಿಂತಿರುಗಿ ಕಳುಹಿಸಿದುದು, ಮತ್ತು ಪರೀಕ್ಷಿದ್ರಾಜನು ತಕ್ಷಕನಿಂದ ದಷ್ಟನಾಗಿ ಮೃತನಾಗುವುದು
೧೧ನೆಯ ಅಧ್ಯಾಯ
ಜನಮೇಜಯರಾಜನು ಉತ್ತಂಕನಿಂದ ಪ್ರೇರಿತನಾಗಿ ಸರ್ಪಯಾಗವನ್ನು ಮಾಡುವುದು ಮತ್ತು ಅದನ್ನು ಸರ್ಪರಾಜನಾದ ವಾಸುಕಿಯ ತಂಗಿಯಾದ ಜರತ್ಕಾರುವಿನ ಮಗನಾದ ಆಸ್ತೀಕಮುನಿಯು ಬಂದು ನಿಲ್ಲಿಸುವುದು
೧೨ನೆಯ ಅಧ್ಯಾಯ
ಕದ್ರೂ, ವಿನತಾ ದೇವಿಯರ ಪಂದ್ಯವು, ಕದ್ರುವಿನ ಮೋಸ, ವಿನತೆಯ ಬಿಡುಗಡೆ, ಜರತ್ಕಾರು ದಂಪತಿಗಳಿಂದ ಆಸ್ತೀಕಮುನಿಯ ಜನ್ಮವೃತ್ತಾಂತವು ಮತ್ತು ದೇವೀಭಾಗವತದ ಮಾಹಾತ್ಮ್ಯ ವರ್ಣನೆಯು